ಭಗವದ್ಗೀತೆ ಪ್ರಚಾರಕ್ಕೆ ಅಡಿಪಾಯ ಹಾಕಿದ್ದೇ ರಾಜೀವ್ ಗಾಂಧಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಬೆಂಗಳೂರು: ಭಗವದ್ಗೀತೆ ಪ್ರಚಾರಕ್ಕೆ ಅಡಿಪಾಯ ಹಾಕಿದ್ದೇ ರಾಜೀವ್ ಗಾಂಧಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರಾಜ್ಯದ ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡೀ ರಸ್ತೆಗಳು ಬಿಕೋ ಎನ್ನುವಾಗ ದೂರದರ್ಶನದ ಮೂಲಕ ಮನೆ ಮನೆಗೆ ಮಹಾಭಾರತ, ರಾಮಾಯಣ ತೋರಿಸಿದ್ದರು. ಈ ಮೂಲಕ ಭಗವದ್ಗೀತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವಿಸಿದರು. ಇಂದು ಭಗವದ್ಗೀತೆ ವಿಚಾರದಲ್ಲಿ ಸಮಾಜವನ್ನು ಇಬ್ಭಾಗ ಮಾಡಲು ಬಿಜೆಪಿ ಮುಂದಾಗಿದೆ. ಆದರೆ ಜನ ಏನು ದಡ್ಡರಲ್ಲ, ಎಲ್ಲವನ್ನು ಗಮನಿಸುತ್ತಾರೆ ಎಂದರು.
ರಾಜೀವ್ ಗಾಂಧಿ ಅವರು ದೂರದರ್ಶನದಲ್ಲಿ ಮಹಾಭಾರತ ರಾಮಾಯಣ ತೋರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಿಸಿದರು. ಇಂದು ಪುಸ್ತಕಗಳಲ್ಲಿ ಇಲ್ಲವೇ, ನಾವೆಲ್ಲಾ ಹಿಂದೂ ಅಲ್ಲವೇ. ರಾಜೀವ್ ಗಾಂಧಿ ಇಡೀ ದೇಶಕ್ಕೆ ಹಿರಿಯ ಚಿಕ್ಕಂದಿರವರೆಗೆ ಭಗವದ್ಗೀತೆ ಪರಿಚಯಿಸಿ ಅಡಿಪಾಯ ಹಾಕಿಕೊಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಹುಟ್ಟುವ ಮಗು ಯಾವ ಜಾತಿಯದ್ದು? | ಗರ್ಭಿಣಿ ಪತ್ನಿಯನ್ನು ಕೊಂದ ಪಾಪಿ!
ಮಾತು ಬಾರದ, ಕಿವಿಯೂ ಕೇಳದ ಯುವಕನ ವರಿಸಿದ ಪದವೀಧರ ಯುವತಿ
ನಾಳೆ ಪೊಸರುಗುಡ್ಡೆ ಮಿಯ್ಯಾರು ಶ್ರೀ ಸತ್ಯಸಾರಮಾನಿ ದೈವಸ್ಥಾನದ ವಾರ್ಷಿಕ ನೇಮೋತ್ಸವ
ಹಿಜಾಬ್ ತೀರ್ಪು: ಬಂದ್ ಕರೆ ನೀಡಿದವರ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳಲು ಅರ್ಜಿ ಸಲ್ಲಿಕೆ