ದೇವಸ್ಥಾನ ಬಾಗಿಲು ಹಾಕಿದ ಬಳಿಕ ದರ್ಶನ ಪಡೆಯಲು ಬಂದ ಭಕ್ತರಿಗೆ ಹಿಗ್ಗಾಮುಗ್ಗ ಥಳಿತ
ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಆವರಣದೊಳಗೆ ಶನಿವಾರ ಭಕ್ತರು ಮತ್ತು ದೇವಾಲಯದ ಕೆಲವು ಸಿಬ್ಬಂದಿ ನಡುವೆ ಮಾರಾಮಾರಿ ನಡೆದಿದೆ.
ದೇವಳದ ನಾಲ್ವರು ಸಿಬ್ಬಂದಿ ಮತ್ತು ಇಬ್ಬರು ಭಕ್ತರು ಪರಸ್ಪರ ತಳ್ಳುತ್ತಿರುವ ವಿಡಿಯೋ ವೈರಲ್ ಆಗಿದ್ದು, ಶನಿವಾರ ಸಂಜೆ ದೇವಾಲಯದ ಗರ್ಭಗುಡಿಯಲ್ಲಿ ‘ಆರತಿ’ ನಡೆಯುತ್ತಿರುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಬಾಗಿಲು ಹಾಕಿದ್ದರೂ ಭಕ್ತರು ದರ್ಶನಕ್ಕೆ ಪಟ್ಟು ಹಿಡಿದರು. ಈ ವೇಳೆ ಭಕ್ತರು ಮತ್ತು ದೇವಾಲಯದ ಸಿಬ್ಬಂದಿ ಪರಸ್ಪರ ತಳ್ಳಲು ಪ್ರಾರಂಭಿಸಿದಾಗ ವಾಗ್ವಾದ ಪ್ರಾರಂಭವಾಯಿತೆನ್ನಲಾಗಿದೆ.
ದೇವರ ದರ್ಶನಕ್ಕೆ ಅವಕಾಶ ಕೊಡಿ ಎಂದು ಇಬ್ಬರು ಭಕ್ತರು ಮನವಿ ಮಾಡಿದರೂ ಕೇಳದ ದೇವಾಲಯದ ಸಿಬ್ಬಂದಿ ಇತರ ನಾಲ್ವರನ್ನು ಕರೆದು ದೇವಾಲಯದ ಆವರಣದಲ್ಲೇ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆನ್ನಲಾಗಿದ್ದು, ಘಟನೆ ಸಂಬಂಧ ಭಕ್ತರು ದೂರು ದಾಖಲಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka