ಭಾನುಚಂದ್ರ ಕೃಷ್ಣಾಪುರ ಅವರ ಪುಣ್ಯಸ್ಮರಣೆ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಬಂಟ್ವಾಳ: ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘ (ರಿ.) ಜೋಡುಮಾರ್ಗ ದಕ್ಷಿಣ ಕನ್ನಡ ಇದರ 1997 ರ ಸ್ಥಾಪಕ ಭಾನುಚಂದ್ರ ಕೃಷ್ಣಾಪುರ ಅವರು ಜುಲೈ 23ರಂದು ನಿಧನರಾಗಿದ್ದು, ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು.
ಬಂಟ್ವಾಳ ಸರಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ಹಂಪಲು ವಿತರಿಸುವ ಮೂಲಕ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಮಾತನಾಡಿದ ಸಂಘದ ಮುಖಂಡರು, ಭಾನುಚಂದ್ರ ಕೃಷ್ಣಾಪುರ ಅವರು ನಮ್ಮೆಲ್ಲರ ಮಾರ್ಗದರ್ಶಕರಾಗಿದ್ದರು. ಸಾಮಾಜಿಕ ಚಿಂತಕರಾಗಿ ಮತ್ತು ಸಮಾಜದ ಧೀಮಂತ ನಾಯಕ ದಲಿತರ ಆಶಾಕಿರಣ. ಅವರ ಅಗಲಿಕೆ ನಮಗೆ ಅತೀವ ನೋವು ತಂದಿದೆ ಎಂದರು.
ಈ ಸಂದರ್ಭ ಸಂಘದ ಅಧ್ಯಕ್ಷರಾದ ಕೆ.ಸತೀಶ್ ಅರಳ, ಕಾರ್ಯಾಧ್ಯಕ್ಷರಾದ ರಾಜಾ ಚೆಂಡ್ತಿಮಾರ್, ಉಪಾಧ್ಯಕ್ಷರಾದ ಪಿ.ಕೇಶವ ನಾಯ್ಕ, ಪ್ರಧಾನ ಕಾರ್ಯಾದರ್ಶಿ ವೆಂಕಟೇಶ್ ಕೃಷ್ಣಾಪುರ, ಖಜಾಂಚಿ ಶ್ರೀನಿವಾಸ್ ಆರ್ಬಿಗುಡ್ಡೆ, ಕ್ರೀಡಾಧ್ಯಕ್ಷರಾದ ಚಂದ್ರಹಾಸ್ ಆರ್ಬಿಗುಡ್ಡೆ, ಜೊತೆ ಕಾರ್ಯದರ್ಶಿ ಸಂತೋಷ್ ಭಂಡಾರಿಬೆಟ್ಟು, ಗೌರವ ಸಾಲೆಹೆಗರರಾದ ನಾರಾಯಣ ಬಂಗೇರ ಕೃಷ್ಣಾಪುರ, ಚಿದಾನಂದ ಬಡಗಬೆಳ್ಳೋರು ಮತ್ತು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka