ಭರತ್ ಶೆಟ್ಟಿ ಹಿಂದೂತ್ವದ ಹೆಸರಲ್ಲಿ ವಾಮಮಾರ್ಗದಲ್ಲಿ ಶಾಸಕರಾದವರು: ಮೊಹಿಯುದ್ದೀನ್ ಬಾವ ವಾಗ್ದಾಳಿ

moidin bava
02/02/2023

ಭರತ್ ಶೆಟ್ಟಿ ಹಿಂದೂತ್ವದ ಹೆಸರಲ್ಲಿ ವಾಮಮಾರ್ಗದ ಮೂಲಕ ಶಾಸಕರಾದವರು‌. ಅಲ್ಲದೆ ನಮ್ಮ ಸರ್ಕಾರ ಇದ್ದಾಗ, ನಾನು ಶಾಸಕನಾಗಿದ್ದಾಗ ಜಾರಿಯಾಗಿದ್ದ ಯೋಜನೆ ಹೆಸರಲ್ಲಿ ಈಗಿನ ಶಾಸಕ ಭರತ್ ಶೆಟ್ಟಿ ಅವರು ಬೇರೆ ಬೇರೆ ವಾರ್ಡ್‌ಗಳಲ್ಲಿ ರಸ್ತೆ ಅಭಿವೃದ್ಧಿ ಹೆಸರಿನ ಕಾಮಗಾರಿಗೂ ತಮ್ಮ ಭಾವಚಿತ್ರವಿರುವ ಫ್ಲೆಕ್ಸ್‌ ಹಾಕುವ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ, ಉತ್ತರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಮೊಹಿಯುದ್ದೀನ್ ಬಾವ ಆರೋಪಿಸಿದ್ದಾರೆ.

ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಗಳೂರು ಉತ್ತರ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ 1,900 ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ ಎಂದು ಶಾಸಕ ವೈ.ಭರತ್ ಶೆಟ್ಟಿ ಹೇಳಿದ್ದಾರೆ. ಆ ಅನುದಾನದಲ್ಲಿ ಕ್ಷೇತ್ರದಲ್ಲಿ ಯಾವ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ’ ಎಂದು ಸವಾಲು ಹಾಕಿದ್ದಾರೆ.

ನಾನು ಶಾಸಕನಾಗಿದ್ದಾಗ ಸುರತ್ಕಲ್ ಜಂಕ್ಷನ್–-ಗಣೇಶಪುರ ದೇವಸ್ಥಾನದ ಷಟ್ಪಥ ರಸ್ತೆಗೆ 2017-18ರಲ್ಲಿ 58 ಕೋಟಿ ಮಂಜೂರಾಗಿ, ಟೆಂಡರ್‌ ಕರೆಯಲಾಗಿತ್ತು.  ಭರತ್ ಶೆಟ್ಟಿ ಅವರು ಆ ಟೆಂಡರ್‌ ರದ್ದುಗೊಳಿಸಿ, ಮರು ಟೆಂಡರ್‌ ಕರೆಯುವಂತೆ ಮಾಡಿದರು. ಆ ಕಾಮಗಾರಿ ಇನ್ನೂ ನಡೆದಿಲ್ಲ. ಈಗ ಅನುದಾನವನ್ನು 18 ಕೋಟಿಗೆ ಕಡಿತಗೊಳಿಸುವ ಮೂಲಕ ಆ ಪ್ರದೇಶದ ಜನರಿಗೆ ಅನ್ಯಾಯ ಮಾಡಿದ್ದಾರೆ’ ಎಂದರು.

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version