ಭಾರತ ಬಂದ್: ಬೆಂಗಳೂರಿನಲ್ಲಿ ಹೈಅಲಾರ್ಟ್ | ಬಂದ್ ತೀವ್ರ ಸ್ವರೂಪದಲ್ಲಿರುವ ಸಾಧ್ಯತೆ!
![bharath bandh](https://www.mahanayaka.in/wp-content/uploads/2021/09/bharath-bandh.jpg)
ಬೆಂಗಳೂರು: ನಾಳೆ ಭಾರತ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಂದ್ ತೀವ್ರ ಸ್ವರೂಪದಲ್ಲಿರಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ನಾಳೆ ಟ್ರಾಫಿಕ್ ಜಾಮ್ ಆಗೋದು ಪಕ್ಕಾ ಎಂದು ಹೇಳಲಾಗ್ತಿದೆ. ಪ್ರತಿಭಟನಾ ಮೆರವಣಿಗೆ ಮೈಸೂರು ರಸ್ತೆ, ಕೆ.ಆರ್. ಪುರಂ, ಮಾಗಡಿ ರಸ್ತೆ, ಹೊಸೂರು ರಸ್ತೆಯಿಂದ ಬರಲಿದೆ. ಇದಲ್ಲದೇ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ನಾಳೆ ಭಾರತ್ ಬಂದ್ ನಡೆಯಲಿದೆ. ನಾಳೆ ಬೆಂಗಳೂರಿನಾದ್ಯಂತ ಪೊಲೀಸರಿಂದ ಹೈಅಲರ್ಟ್ ಘೋಷಿಸಲಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ 12 ಡಿಸಿಪಿ, ಎಲ್ಲಾ ಎಸಿಪಿಗಳು, 120ಕ್ಕೂ ಹೆಚ್ಚು ಇನ್ಸ್ ಪೆಕ್ಟರ್ ಗಳು, 150ಕ್ಕೂ ಹೆಚ್ಚು ಸಬ್ ಇನ್ಸ್‌ಪೆಕ್ಟರ್ ಗಳು ಸೇರಿದಂತೆ, ಭದ್ರತೆಗಾಗಿ ನಾಳೆ 5 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ.
ಮುಂಜಾನೆ 5 ಗಂಟೆಯಿಂದಲೇ ಪೊಲೀಸರ ನಿಯೋಜನೆ ಮಾಡಲಾಗಿದೆ. ಪ್ರತಿ ವಿಭಾಗದಲ್ಲಿ ಡಿಸಿಪಿಗಳ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ. ನಗರದ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಫ್ರೀಡಂಪಾರ್ಕ್, ಟೌನ್‌ಹಾಲ್‌ನಲ್ಲಿ ಹೆಚ್ಚುವರಿ ಭದ್ರತೆ ಇದೆ. ಹೆಚ್ಚುವರಿಯಾಗಿ ಕೆಎಸ್ಆರ್ಪಿ, ಸಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ ಎಂದು ವರದಿಯಾಗಿದೆ.
ಸಾರ್ವಜನಿಕರ ದೈನಂದಿನ ಕೆಲಸಕ್ಕೆ ಅಡ್ಡಿಪಡಿಸುವಂತಿಲ್ಲ. ನಾಳೆ ಯಾವುದೇ ರಸ್ತೆ ತಡೆಗಳಿಗೆ ಅನುಮತಿ ನೀಡಿಲ್ಲ. ಈವರೆಗೂ ಯಾರೂ ಮೆರವಣಿಗೆಗೆ ಅನುಮತಿ ಕೇಳಿಲ್ಲ. ಪ್ರತಿಭಟನೆ ಹೆಸರಿನಲ್ಲಿ ನಿಯಮ ಉಲ್ಲಂಘಿಸುವಂತಿಲ್ಲ. ದುಷ್ಕೃತ್ಯಗಳಲ್ಲಿ ಭಾಗಿಯಾದ್ರೆ ಪೊಲೀಸರಿಂದ ಕಠಿಣ ಕ್ರಮ ಎಂಬ ಸೂಚನೆ ನೀಡಲಾಗಿದೆ. ನಾಳೆ ನಡೆಯುವ ಬಂದ್ ತೀವ್ರ ತರಹವಾಗಿರುತ್ತದೆ ಎಂದು ರೈತ ಮುಖಂಡ ಕೋಡಿಹಳ್ಳಿ ತಿಳಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಬಂದ್ ಗೆ ಬೆಂಬಲ ಸೂಚಿಸಿವೆ ಹೀಗಾಗಿ ರಾಜ್ಯಾದ್ಯಂತ ಪ್ರತಿಭಟನೆಗಳು, ಮೆರವಣಿಗೆಗೆಗಳು ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಸಿಎಂ ಬೊಮ್ಮಾಯಿ ಬೆಂಗಾವಲು ವಾಹನ ಕಂಡು ಗಾಬರಿಯಿಂದ ಸ್ಕೂಟಿಯಿಂದ ಬಿದ್ದ ಮಹಿಳೆ!
ಸೊಂಟಕ್ಕೆ ವೇಲ್ ಕಟ್ಟಿಕೊಂಡು ಬೆಟ್ಟದಿಂದ ಹಾರಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು
ದಲಿತ ಮಕ್ಕಳ ಊಟದ ತಟ್ಟೆಯನ್ನು ಇತರ ಮಕ್ಕಳು ಮುಟ್ಟುತ್ತಿಲ್ಲ | ದೇವರಂತ ಮಕ್ಕಳ ಮೇಲೆಯೂ ಅಸ್ಪೃಶ್ಯತೆಯ ಕರಿನೆರಳು
ಪ್ರತಿಭಟನೆ ಹೆಸರಲ್ಲಿ ಜನರಿಗೆ ತೊಂದರೆ ಕೊಡುವುದು ಬೇಡ | ಭಾರತ್ ಬಂದ್ ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ
“ಗದ್ದೆ ನೋಡಲು ಹೋಗೋಣ ಬಾ” ಎಂದು ಪತ್ನಿಯನ್ನು ಕರೆದೊಯ್ದು ಹತ್ಯೆ ಮಾಡಿದವನಿಗೆ ಜೀವಾವಧಿ ಶಿಕ್ಷೆ
ಶಾಕಿಂಗ್ ನ್ಯೂಸ್: ಹುಟ್ಟು ಹಬ್ಬದ ಪಾರ್ಟಿಗೆ ಆಗಮಿಸಿದ್ದ ಮಹಿಳಾ ಪೊಲೀಸ್ ಮೇಲೆ ಸಾಮೂಹಿಕ ಅತ್ಯಾಚಾರ