ಭಾರತ್ ಜೋಡೋ ಯಾತ್ರೆ ಕೇರಳದಿಂದ ಯಶಸ್ವಿಯಾಗಿ ಸಾಗ್ತಿದೆ: ವಿಪಕ್ಷ ಉಪ ನಾಯಕ ಯು.ಟಿ.ಖಾದರ್

u t khadar
24/09/2022

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಕೇರಳದಿಂದ ಯಶಸ್ವಿಯಾಗಿ ಸಾಗ್ತಿದೆ. ಈ ತಿಂಗಳ ಕೊನೆಗೆ ಗುಂಡ್ಲುಪೇಟೆ ಮೂಲಕ ರಾಜ್ಯಕ್ಕೆ ಬರಲಿದೆ. ರಾಹುಲ್ ಗಾಂಧಿಯವರ ಪಾದಯಾತ್ರೆ ಐತಿಹಾಸಿಕ ಪಾದಯಾತ್ರೆ. ಅಲ್ದೇ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಮೂರುವರೆ ಸಾವಿರ ಕಿ.ಮೀ ಐತಿಹಾಸಿಕ ಪಾದಯಾತ್ರೆ ಆಗಿದೆ ಎಂದು ಮಂಗಳೂರಿನಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿಕೆ ನೀಡಿದರು.

ಮಂಗಳೂರಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆಯ ಉದ್ದೇಶ ಸರ್ವ ಜನರನ್ನ ಬೆಸೆಯೋದು. ಈ ದೇಶದಲ್ಲಿ ಯಾರೂ ಸಮಾಧಾನ, ನೆಮ್ಮದಿ ಮತ್ತು ಸೌಹಾರ್ದತೆಯಿಂದ ಇಲ್ಲ.ಆತಂಕದಲ್ಲಿ ಇರೋ ಸರ್ವರಿಗೂ ಆತ್ಮವಿಶ್ವಾಸ ಕೊಡೋ ಯಾತ್ರೆ ಇದು. ಕಾಂಗ್ರೆಸ್ ಪಕ್ಷ ಒಗ್ಗಟ್ಟಿನಲ್ಲಿದೆ, ಸಿದ್ದರಾಮಯ್ಯ ಮತ್ತು ಡಿಕೆಶಿ ಒಗ್ಗಟ್ಟಿನಲ್ಲಿದ್ದಾರೆ. ಜೋಡೋ ಯಾತ್ರೆಯಲ್ಲೂ ಜೊತೆ ಸೇರಿ ಎಲ್ಲರೂ ಕೈ ಜೋಡಿಸಲಿದ್ದಾರೆ. ಪಕ್ಷದಲ್ಲಿ ಒಗ್ಗಟ್ಟಿಲ್ಲ ಎಂಬ ಅಪಪ್ರಚಾರ ಬಿಜೆಪಿಯ ಅಜೆಂಡಾ. ಕಾರ್ಯಕರ್ತರು ಮತ್ತು ಜನರ ಮಧ್ಯೆ ಗೊಂದಲ ಸೃಷ್ಟಿಸುವ ಕೆಲಸ ಮಾಡ್ತಿದ್ದಾರೆ. ಕಾಂಗ್ರೆಸ್ ನ ಶಾಸಕರು, ಸಂಸದರು ಪಕ್ಷ ಬಿಟ್ಟು ಹೋದರೂ ತತ್ವದರ್ಶ ಬದಲಾಗಲ್ಲ ಎಂದರು.

ನಮ್ಮ ತತ್ವ ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ, ಇಡೀ ದೇಶಕ್ಕೆ ಒಂದೇ ಆಗಿದೆ. ಕಾಂಗ್ರೆಸ್ ಮುಖಂಡರು ಮತ್ತು‌ ನಾಯಕರು ತಪ್ಪಿದರೂ ಪಕ್ಷ ಯಾವತ್ತೂ ಸಿದ್ದಾಂತ ತಪ್ಪಿಲ್ಲ. ಏಕ ಭಾರತ್ ಶ್ರೇಷ್ಠ ಭಾರತ್ ಅಂತ ಮಹಾತ್ಮಾ ಗಾಂಧಿಯವರೇ ಹೇಳಿದ್ದಾರೆ. ಪೇ ಸಿಎಂ ಪೋಸ್ಟರ್ ಅಂಟಿಸುವ ಅಭಿಯಾನ ನಾವು ಮಾಡಿದ್ದೇವೆ. ಕಾಂಗ್ರೆಸ್ ‌ನವರು ಮಾಡಿದರೆ ತಪ್ಪು, ಬಿಜೆಪಿಯವರು ಸೋಶಿಯಲ್ ‌ಮೀಡಿಯಾದಲ್ಲಿ ಏನು ಬೇಕಾದರೂ ಹಾಕಬಹುದು. ರಾಹುಲ್, ಸೋನಿಯಾ, ಸಿದ್ದರಾಮಯ್ಯ ಬಗ್ಗೆ ಇವರು ಏನೇನೂ ಹಾಕಿಲ್ವಾ? ಆಗ ಯಾಕೆ ತನಿಖೆ ಮಾಡಿಲ್ಲ, ಆ ಬಗ್ಗೆಯೂ ತನಿಖೆ ಆಗಲಿ ಅಂದ್ರು.

ಇನ್ನು ಪಿಎಫ್ ಐ ಮತ್ತು ಎಸ್ ಡಿಪಿಐ ಕಾರ್ಯಕರ್ತರ ಮೇಲೆ ಎನ್ ‌ಐಎ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವ್ರು, ಸಮಾಜದಲ್ಲಿ ಅಶಾಂತಿ, ಭಯ, ಕೊಲೆ ಇವತ್ತು ಹೆಚ್ಚಾಗಿದೆ. ಈ ರೀತಿ ಭಯ ಹುಟ್ಟಿಸೋ ಕೆಲಸ ಯಾರೇ ಮಾಡಿದರೂ . ಸಾಕ್ಷಿ ಇದ್ದರೆ ತಾರತಮ್ಯ ಮಾಡದೇ ಕಾನೂನು ಕ್ರಮ ಕೈಗೊಳ್ಳಲಿ. ಆದರೆ ಕಾನೂನು ಪಾಲಿಸುವಾಗ ಯಾವುದೇ ತಾರತಮ್ಯ ಬೇಡ. ಸರ್ಕಾರ ಬಿಜೆಪಿ ಕೈಯ್ಯಲಿದೆ, ಸಾಕ್ಷಿ ಒದಗಿಸಿ ಕ್ರಮ ತೆಗೆದುಕೊಳ್ಳಲಿ.ಈ ದೇಶದಲ್ಲಿ ಕಾನೂನು ಇರುವಾಗ ಯಾರ ಕೇಸನ್ನೂ ಹಾಗೆ ತೆಗೆಯಲು ಆಗಲ್ಲ. ಗುಂಪು ಗಲಭೆ ಆದಾಗ ಕೆಲವರ ಮೇಲೆ ಕೇಸ್ ಆದಾಗ ವಾಪಾಸ್ ತೆಗೆಯಲು ಅವಕಾಶ ಇದೆ. ಸುಮ್ಮನೆ ಆರೋಪ ‌ಮಾಡೋದು ಸರಿಯಲ್ಲ, ದಾಖಲೆ ತೋರಿಸಲಿ ಅಂದ್ರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

FacebookTwitterWhatsappInstagramEmailTelegram

ಇತ್ತೀಚಿನ ಸುದ್ದಿ

Exit mobile version