ಭಾರತವು ಕಂಪೆನಿಗಳ ಗುಲಾಮಗಿರಿಯತ್ತ ಸಾಗುತ್ತಿದೆ | ಈಸ್ಟ್ ಇಂಡಿಯಾ ಕಂಪೆನಿಯನ್ನು ನೆನಪಿಸಿದ ರಾಹುಲ್ ಗಾಂಧಿ
ನವದೆಹಲಿ: 70 ವರ್ಷಗಳಲ್ಲಿ ನಿರ್ಮಿಸಿದ್ದ ಭಾರತದ ಕಿರೀಟಗಳನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಉದ್ಯಮಿ ಸ್ನೇಹಿತರಿಗೆ ಉಡುಗೊರೆಯಾಗಿ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದು, ಭಾರತದ ಸರ್ಕಾರಿ ಸಂಸ್ಥೆಗಳನ್ನು ಅಂಬಾನಿ ಸಹೋದರರಿಗೆ ಮಾರಾಟ ಮಾಡುತ್ತಿರುವ ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕಳೆದ 70 ವರ್ಷಗಳಲ್ಲಿ ಭಾರತದಲ್ಲಿ ಏನೂ ಅಭಿವೃದ್ಧಿ ಆಗಿಲ್ಲ ಎನ್ನುತ್ತಿರುವ ಬಿಜೆಪಿ, ಈಗ ಆ ಸಮಯದಲ್ಲಿ ಸಾರ್ವಜನಿಕ ಹಣದಿಂದ ಸೃಷ್ಟಿಯಾಗಿದ್ದ ಎಲ್ಲ ಆಸ್ತಿಗಳನ್ನು ಮಾರಾಟ ಮಾಡಲು ಹೊರಟಿದೆ ಎಂದು ಟೀಕಿಸಿದರು.
ಪ್ರಮುಖ ಕ್ಷೇತ್ರಗಳಲ್ಲಿ ಏಕಸ್ವಾಮ್ಯವನ್ನು ಸೃಷ್ಟಿಸುವುದು ಕೇಂದ್ರ ಸರ್ಕಾರದ ಖಾಸಗೀಕರಣದ ಯೋಜನೆಯ ಗುರಿಯಾಗಿದ್ದು, ಇದರಿಂದ ಉದ್ಯೋಗಗಳಿಗೆ ಕತ್ತರಿ ಬೀಳುತ್ತವೆ. ಅನೌಪಚಾರಿಕ ವಲಯವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತದೆ. ಸಣ್ಣ ಉದ್ಯಮಗಳನ್ನು ನಾಶಪಡಿಸುತ್ತದೆ. ಇದು ಜನರು ಗುಲಾಮಗಿರಿ ಮಾಡುವಂತಹ ಸನ್ನಿವೇಶವನ್ನು ಸೃಷ್ಟಿಸುತ್ತದೆ ಎಂದು ರಾಹುಲ್ ಗಾಂಧಿ ಎಚ್ಚರಿಸಿದರು.
ಈ ಮೊದಲು ನಾವು ಈಸ್ಟ್ ಇಂಡಿಯಾ ಕಂಪೆನಿಯನ್ನು ಕಂಡಿದ್ದೇವೆ. ಈ ಕಂಪೆನಿಯು ದೇಶದ ಜನರನ್ನು ಗುಲಾಮರನ್ನು ಮಾಡಿತು. ಇದೀಗ ಮತ್ತೆ ಅದೇ ಸ್ಥಿತಿ ದೇಶದಲ್ಲಿ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ನಾವು ಗುಲಾಮಗಿರಿಯತ್ತ ಸಾಗುತ್ತಿದ್ದೇವೆ ಎಂದು ಎಚ್ಚರಿಸಿದರು.
ಇನ್ನಷ್ಟು ಸುದ್ದಿಗಳು…
ದಂತ ವೈದ್ಯನ ಕೈಯಿಂದ ಜಾರಿದ ಸ್ಕ್ರೂ ವೃದ್ಧನ ಶ್ವಾಸಕೋಶ ಸೇರಿತು | ಮುಂದೆ ನಡೆದದ್ದೇನು ಗೊತ್ತಾ?
56ನೇ ವಯಸ್ಸಿನಲ್ಲಿ ಮತ್ತೆ ವಿವಾಹವಾದ ಬಹುಭಾಷಾ ನಟ ಪ್ರಕಾಶ್ ರೈ
ಕಾಂಗ್ರೆಸ್ ಭಯೋತ್ಪಾದನೆಯ ಮನಸ್ಥಿತಿಗಳನ್ನು ಪ್ರೋತ್ಸಾಹಿಸುತ್ತದೆ | ಸಚಿವೆ ಶೋಭಾ ಕರಂದ್ಲಾಜೆ
ದೇವರಿಗೆ ಹರಕೆ ತೀರಿಸಿ, ಕಾಲುವೆಗೆ ಇಳಿದ 8 ಮಂದಿಯ ಪೈಕಿ ಮೂವರ ದಾರುಣ ಸಾವು | ಅಷ್ಟಕ್ಕೂ ಅಲ್ಲಿ ನಡೆದದ್ದೇನು ಗೊತ್ತಾ?
ಸಂಸದನ ಮನೆಗೆ ಸೋಡಾ ಬಾಟ್ಲಿಯಿಂದ ದಾಳಿ ನಡೆಸಿದ ನಾಲ್ವರು ದುಷ್ಕರ್ಮಿಗಳು
ನಟಿಯರು ಡ್ರಗ್ಸ್ ಸೇವಿಸಿದ್ದು ದೃಡವಾಗಿದೆ, ಕೇಸ್ ಇನ್ನಷ್ಟು ಗಟ್ಟಿಯಾಗಿದೆ | ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದೇನು?