ಶಾಕಿಂಗ್ ನ್ಯೂಸ್ : ಭಾರತದ ಈ ದೊಡ್ಡ ನಗರ ಜಲಸಮಾಧಿಯಾಗಲಿದೆ!
![mumbai city](https://www.mahanayaka.in/wp-content/uploads/2021/08/mumbai-city.jpg)
ಮುಂಬೈ: ಹವಾಮಾನ ಬದಲಾವಣೆಯಿಂದಾಗಿ ಸಮುದ್ರ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಹೀಗಾಗಿ 2050ರೊಳಗೆ ದಕ್ಷಿಣ ಮುಂಬೈನ ಶೇ 70 ರಿಂದ 80ರಷ್ಟು ಭಾಗ ನೀರಿನಲ್ಲಿ ಮುಳುಗುವ ಸಾಧ್ಯತೆ ಇದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಆಯುಕ್ತ ಇಕ್ಬಾಲ್ ಸಿಂಗ್ ಚಹಲ್ ಎಚ್ಚರಿಸಿದ್ದಾರೆ.
ಮುಂಬೈ ಹವಾಮಾನ ಕ್ರಿಯಾ ಯೋಜನೆ ಮತ್ತು ಜಾಲತಾಣ ಬಿಡುಗಡೆ ಸಮಾರಂಭದಲ್ಲಿ ಈ ಆಘಾತಕಾರಿ ವಿಚಾರವನ್ನು ತಿಳಿಸಿದ ಅವರು, ಚಹಲ್, ದಕ್ಷಿಣ ಮುಂಬೈನ ಪ್ರಮಖ ವ್ಯಾಪಾರ ಜಿಲ್ಲೆಯಾಗಿರುವ ನಾರಿಮನ್ ಪಾಯಿಂಟ್ ಮತ್ತು ರಾಜ್ಯ ಸಚಿವಾಲಯಗಳ ಕಚೇರಿಗಳು, ಎ, ಬಿ, ಸಿ ಮತ್ತು ಡಿ ವಾರ್ಡ್‌ಗಳು ಸೇರಿದಂತೆ ಪ್ರಮುಖ ಭಾಗಗಳು ನೀರಿನಲ್ಲಿ ಮುಳುಗಡೆಯಾಗಲಿವೆ ಎಂದು ಹೇಳಿದರು.
ಪ್ರಕೃತಿ ಈಗಾಗಲೇ ಎಚ್ಚರಿಕೆ ನೀಡುತ್ತಿದ್ದರೂ, ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ದಕ್ಷಿಣ ಮುಂಬೈನ ಪ್ರಮುಖ ಪ್ರದೇಶಗಳು ಮುಳುಗಿ ಹೋಗುತ್ತವೆ. ಇದರರ್ಥ ಕಣ್ಮರೆಯಾಗಲಿದೆ ಎಂದು ಸಿಂಗ್ ಹೇಳಿದ್ದಾರೆ.
ಇನ್ನಷ್ಟು ಸುದ್ದಿಗಳು…
ವಿಮಾನದೊಳಗೆ ಸಿಗರೇಟ್ ಸೇದಿದ ಮಹಿಳೆ: ಸಹ ಪ್ರಯಾಣಿಕರು ವಿರೋಧಿಸಿದರೂ ಕ್ಯಾರೇ ಅನ್ನಲಿಲ್ಲ
ಮದುವೆಯಾದ ಮೂರೇ ದಿನದಲ್ಲಿ ಮದುಮಗಳು ಸಾವು: ಸಂಭ್ರಮದ ಮನೆಯಲ್ಲಿ ಮಡುಗಟ್ಟಿದ ಶೋಕ
ಮೈಸೂರು: ಸಾಮೂಹಿಕ ಅತ್ಯಾಚಾರದ ಆರೋಪಿಗಳು ಇನ್ನಷ್ಟು ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಕೆ!
ಬೆತ್ತಲೆ ವಿಡಿಯೋ ಕಾಲ್ ಮಾಡಿದ ಯುವತಿ, ಆಟೋ ಚಾಲಕನನ್ನೂ ಬೆತ್ತಲೆಗೊಳಿಸಿ ವಿಡಿಯೋ ವೈರಲ್ ಮಾಡಿಸಿದಳು!
ಅನಿಷ್ಟ ಕಾಮುಕರನ್ನು ಬಂಧಿಸುವ, ಶಿಕ್ಷಿಸುವ ಕಾನೂನು ಗಟ್ಟಿಯಾಗಬೇಕು | ನಟಿ ಶೃತಿ
ಆ ಹುಡುಗಿ ಅಷ್ಟೊತ್ತಿಗೆ ಅಲ್ಲಿಗೆ ಏಕೆ ಹೋಗಿದ್ದಳೋ? | ಗ್ಯಾಂಗ್ ರೇಪ್ ಬಗ್ಗೆ ಮಂಜುಳಾ ಮಾನಸ ಉಡಾಫೆ ಮಾತುಗಳು