ಭಾರತಕ್ಕೆ ಆತ್ಮಾಹುತಿ ದಾಳಿಯ ಬೆದರಿಕೆ ಹಾಕಿದ ಅಲ್ ಖೈದಾ! - Mahanayaka

ಭಾರತಕ್ಕೆ ಆತ್ಮಾಹುತಿ ದಾಳಿಯ ಬೆದರಿಕೆ ಹಾಕಿದ ಅಲ್ ಖೈದಾ!

al qaeda
08/06/2022

ಪ್ರವಾದಿಯವರ ವಿರುದ್ಧ ಬಿಜೆಪಿ ನಾಯಕಿಯ ಅವಹೇಳನಕಾರಿ ಹೇಳಿಕೆಯನ್ನು ಅರಬ್ ರಾಷ್ಟ್ರಗಳು ವಿರೋಧಿಸಿದ ನಂತರ ಅಲ್ ಖೈದಾ ಭಾರತಕ್ಕೆ ಬೆದರಿಕೆ ಹಾಕಿದೆ.

ಗುಜರಾತ್, ಉತ್ತರ ಪ್ರದೇಶ, ಬಾಂಬೆ ಮತ್ತು ದೆಹಲಿಯಲ್ಲಿ ದಾಳಿ ನಡೆಸುವುದಾಗಿ ಅಲ್ ಖೈದಾ ಎಚ್ಚರಿಕೆ ನೀಡಿದ್ದು,  ಪ್ರವಾದಿ ಮುಹಮ್ಮದ್ ಅವರ ಮಹಿಮೆಯನ್ನು ಧಿಕ್ಕರಿಸುವವರು ಫಲಿತಾಂಶಕ್ಕಾಗಿ ಕಾಯಿರಿ, ಅಂತಹವರಿಗಾಗಿ ದೇಹದಲ್ಲಿ ಬಾಂಬ್  ಕಟ್ಟಿ ಜಿಹಾದಿಗಳು ತಕ್ಕ ಪಾಠ ಕಲಿಸುವುದಾಗಿ ಅಲ್ ಖೈದಾ ಬೆದರಿಕೆ ಹಾಕಿದೆ ಎಂದು ವರದಿಯಾಗಿದೆ.

ಪೊಲೀಸರು ಪತ್ರವನ್ನು ಪರಿಶೀಲಿಸುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ತೀವ್ರ ತನಿಖೆಗೂ ಆದೇಶಿಸಲಾಗಿದೆ.  ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಇಬ್ಬರು ಮಹಿಳೆಯರ ಹೊಟ್ಟೆಯಿಂದ ಕೆಳ ಭಾಗ ಕತ್ತರಿಸಿದ ಮೃತದೇಹ ಪತ್ತೆ: ಬೆಚ್ಚಿಬಿದ್ದ ಜನ

ಬಸ್ಸಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

ತರಗತಿಯಲ್ಲೇ ನಿದ್ದೆ ಹೋದ ಶಿಕ್ಷಕಿಗೆ ಬೀಸಣಿಗೆಯಲ್ಲಿ ಗಾಳಿ ಬೀಸಿದ ವಿದ್ಯಾರ್ಥಿನಿ!

ಪಠ್ಯಪುಸ್ತಕ ಪರಿಷ್ಕರಣೆ ಯಡವಟ್ಟು: ಶಿಕ್ಷಣ ಸಚಿವರಿಗೆ ಮಾಜಿ ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದ್ದೇನು?

ಇತ್ತೀಚಿನ ಸುದ್ದಿ