ಫನ್ ಬಕೆಟ್ ಭಾರ್ಗವ್ ನ ಅಸಲಿ ಮುಖ ತೆರೆದಿಟ್ಟ ಸುಮಾಯಾ ಫರ್ಹಾತ್!
ವಿಜಯವಾಡ: ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಕ್ ಟಾಕ್ ಸ್ಟಾರ್ ಫನ್ ಬಕೆಟ್ ಭಾರ್ಗವ್ ನ್ನು ಪೊಲೀಸರು ಬಂಧಿಸಿದ್ದು, ಇದರ ಬೆನ್ನಲ್ಲೇ ಈತನೊಂದಿಗೆ ಆಗಿರುವ ಕಹಿ ಅನುಭವಗಳನ್ನು ಆತನ ಜೊತೆಗೆ ವಿಡಿಯೋ ಮಾಡಿರುವ ಹೆಣ್ಣು ಮಕ್ಕಳು ಹಂಚಿಕೊಳ್ಳುತ್ತಿದ್ದಾರೆ.
ಭಾರ್ಗವ್ ನ ಜೊತೆಗೆ ಹಲವು ವಿಡಿಯೋಗಳಲ್ಲಿ ಕಾಣಿಸಿಕೊಂಡಿರುವ ಸೈಯದ್ ಸುಮಾಯಾ ಫರ್ಹಾತ್, ಭಾರ್ಗವ್ ನ ಅಸಲಿ ಮುಖವನ್ನು ಬಯಲು ಮಾಡಿದ್ದಾಳೆ. ಆರಂಭದಲ್ಲಿ ಭಾರ್ಗವ್ ಒಳ್ಳೆಯ ವ್ಯಕ್ತಿ ಎಂದು ನಾನು ಅಂದುಕೊಂಡಿದ್ದೆ. ಆದರೆ, ಆತನ ಜೊತೆ ಶೂಟಿಂಗ್ ಮಾಡುವ ವೇಳೆ ಅಸುರಕ್ಷಿತ ಭಾವನೆ ಕಾಡುತ್ತಿತ್ತು ಎಂದು ಆಕೆ ಹೇಳಿದ್ದಾಳೆ.
ಆತ ಶೂಟಿಂಗ್ ವೇಳೆ ಇಲ್ಲದ ಚೇಷ್ಟೆ ಮಾಡುತ್ತಿದ್ದ. ಆತ ಮಾಡುತ್ತಿದ್ದ ವಿಡಿಯೋ ಕೂಡ ನನಗೆ ಇಷ್ಟವಾಗುತ್ತಿರಲಿಲ್ಲ. ಇದರಿಂದಾಗಿಯೇ ನಾನು ಆತನಿಂದ ಅಂತರ ಕಾಯ್ದುಕೊಂಡೆ. ಆತನಿಂದ ಅಂತರ ಕಾಯ್ದುಕೊಂಡು ಒಂದು ವರ್ಷವಾಗಿದೆ ಎಂದು ಆಕೆ ಹೇಳಿದ್ದಾಳೆ.
ಭಾರ್ಗವ್ ಕ್ಯಾಮರದ ಮುಂದೆ ಬಹಳ ಒಳ್ಳೆಯ ವ್ಯಕ್ತಿ. ಆದರೆ ಆಫ್ ಕ್ಯಾಮರದಲ್ಲಿ ಆತನ ವ್ಯಕ್ತಿತ್ವವೇ ಬೇರೆಯಾಗಿದೆ. ಆತನ ವರ್ತನೆಗಳೇ ಬೇರೆಯಾಗಿದೆ. ತಾನು ಮಾಡಿರುವುದೇ ಸರಿ ಎನ್ನುವ ಭಾವನೆಯಲ್ಲಿ ಅವನಿರುತ್ತಾನೆ. ಕ್ಯಾಮರದ ಮುಂದೆ ಹೆಣ್ಣುಮಕ್ಕಳಿಗೆ ಆತ ಕೊಡುವಷ್ಟು ಗೌರವ ಕ್ಯಾಮರದ ಹಿಂದೆ ಇರುವುದಿಲ್ಲ ಎಂದು ಆಕೆ ಹೇಳಿದ್ದಾಳೆ.
ಇನ್ನೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಫರ್ಹಾತ್, ತಪ್ಪು ಎರಡು ಕಡೆಯಿಂದಲೂ ಆಗಿರುವ ಸಾಧ್ಯತೆ ಇದೆ. ಆಕೆ 14ನೇ ವಯಸ್ಸಿನಲ್ಲಿ ಅಷ್ಟೊಂದು ತಿಳುವಳಿಕೆ ಇಲ್ಲದವಳಾಗಿರುವುದರಿಂದ ಆತನ ದುಷ್ಕೃತ್ಯಕ್ಕೆ ಬಲಿಯಾಗಿದ್ದಾಳೆ. ಆತನೊಂದಿಗೆ ವಿಡಿಯೋ ಮಾಡುವುದು ನನ್ನು ವೈಯಕ್ತಿಕ ಕಾರಣಕ್ಕೆ ಸೇಫ್ ಅಲ್ಲ ಎಂದು ನನಗನ್ನಿಸಿತು. ಹಾಗಾಗಿ ತಾನು ಅವರ ತಂಡದಿಂದ ಹೊರ ಬಂದೆ ಎಂದು ಆಕೆ ಹೇಳಿದ್ದಾಳೆ.