ಟೋಲ್ ಗೇಟ್ ನಲ್ಲಿ ಭಾರೀ ಅಪಘಾತ: ಆಂಬುಲೆನ್ಸ್ ಮಗುಚಿ ಬಿದ್ದು ಮೂವರು ಸಾವು
ಬೈಂದೂರು: ಅತೀ ವೇಗದಿಂದ ಬಂದ ಆ್ಯಂಬುಲೆನ್ಸ್ ವೊಂದು ಟೋಲ್ ಗೇಟ್ ನ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟರು ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ಸಂಜೆ ಶಿರೂರಿನ ಟೋಲ್ ಗೇಟ್ ನಲ್ಲಿ ನಡೆದಿದೆ.
ವಿಡಿಯೋದಲ್ಲಿ ಕಂಡು ಬಂದಂತೆ, ಆಂಬುಲೆನ್ಸ್ ಶಬ್ಧ ಕೇಳಿ ಟೋಲ್ ಗೇಟ್ ಸಿಬ್ಬಂದಿ ಆತುರಾತುರವಾಗಿ ರಸ್ತೆಯಲ್ಲಿರುವ ಬ್ಯಾರಿಕೇಡ್ ತೆರವುಗೊಳಿಸಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಾಗಲೇ ಆಂಬುಲೆನ್ಸ್ ಮುನ್ನುಗ್ಗಿ ಬಂದಿದ್ದು, ಸಿಬ್ಬಂದಿ ರಸ್ತೆಯಲ್ಲಿರುವ ಕಾರಣ ಏಕಾಏಕಿ ಬ್ರೇಕ್ ಹಾಕಿದ್ದು, ಈ ವೇಳೆ ಆಂಬುಲೆನ್ಸ್ ರಸ್ತೆಗೆ ಅಡ್ಡವಾಗಿ ಜಾರಿ, ಮಗುಚಿ ಬಿದ್ದಿದೆ. ಬಿದ್ದ ರಭಸಕ್ಕೆ ಆಂಬುಲೆನ್ಸ್ ನ ಹಿಂದಿನ ಬಾಗಿಲು ತೆರೆದುಕೊಂಡಿದ್ದು, ಆಂಬುಲೆನ್ಸ್ ನಲ್ಲಿದ್ದವರು ಹೊರಗೆ ಎತ್ತಿ ಎಸೆಯಲ್ಪಟ್ಟಿದ್ದಾರೆ.
ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಹೇಳಲಾಗಿದೆ. ಬೈಂದೂರು ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka