ಭಾರೀ ಮಳೆಗೆ 138 ಮಂದಿ ಸಾವು, 89 ಮಂದಿಗೆ ಗಂಭೀರ ಗಾಯ ನಾಪತ್ತೆಯಾದವರೆಷ್ಟು ಗೊತ್ತಾ?
ಮುಂಬೈ: ಭಾರೀ ಮಳೆಯಿಂದ ಮಹಾರಾಷ್ಟ್ರಲ್ಲಿ ವಿವಿಧೆಡೆ ಅನಾಹುತಗಳು ಸಂಭವಿಸಿದ್ದು, ಈವರೆಗೆ ಮಹಾರಾಷ್ಟ್ರದಾದ್ಯಂತ ಒಟ್ಟು 138 ಮಂದಿ ಮೃತಪಟ್ಟಿದ್ದು, 89 ಮಂದಿ ಗಾಯಗೊಂಡಿದ್ದು, ಹಲವರು ನಾಪತ್ತೆಯಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಯಿಂದ ಪ್ರವಾಹ ಏರ್ಪಟ್ಟಿದ್ದು, ಮಹಾರಾಷ್ಟ್ರದ ಕರಾವಳಿ ಜಿಲ್ಲೆಗಳಲ್ಲಿ ಅನಾಹುತಗಳು ಸಂಭವಿಸಿವೆ. ಈಗಾಗಲೇ ಹಳ್ಳಿ ಪ್ರದೇಶದ 90 ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ. ಈಗಾಗಲೇ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ ಸ್ಪಷ್ಟವಾದ ಮಾಹಿತಿಯಲ್ಲ. ಮೃತಪಟ್ಟವರ ಹಾಗೂ ನಾಪತ್ತೆಯಾದವರ ಬಗ್ಗೆ ಸರ್ಕಾರ ಮಾಹಿತಿ ಸಂಗ್ರಹಿಸುತ್ತಿದೆ ಪರಿಹಾರ ಮತ್ತು ಪುನರ್ವಸತಿ ಸಚಿವ ವಿಜಯ್ ವಾಟೆಟ್ಟಿವಾರ್ ತಿಳಿಸಿದ್ದಾರೆ.
ಮಹಾರಾಷ್ಟ್ರದ ರಾಯ್ ಗಡ್, ರತ್ನಾಗಿರಿ, ಪಾಲ್ಘರ್, ಥಾಣೆ, ಸಿಂಧುದುರ್ಗ್, ಕೊಲ್ಹಾಪುರ, ಸಾಂಗ್ಲಿ ಮತ್ತು ಸತಾರಾ ಜಿಲ್ಲೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಇನ್ನೂ ವ್ಯತಿರಿಕ್ತ ಹವಾಮಾನದಿಂದಾಗಿ ಹೆಲಿಕಾಫ್ಟರ್ ಗಳನ್ನು ಕಾರ್ಯಾಚರಣೆಗೆ ಬಳಸಲು ತೊಡಕಾಗಿದೆ. ಹೀಗಾಗಿ ರಕ್ಷಣಾ ಹೆಲಿಕಾಫ್ಟರ್ ಗಳು ಹಳ್ಳಿಗಳಿಗೆ ತಲುಪಲು ಕಷ್ಟಕರವಾಗಿದೆ ಎಂದು ತಿಳಿದು ಬಂದಿದೆ.
ಇನ್ನಷ್ಟು ಸುದ್ದಿಗಳು…
ನನ್ನ ಗಂಡ ಅಮಾಯಕ, ಅವರು ಮಾಡಿದ್ದು ಸೆಕ್ಸ್ ವಿಡಿಯೋ ಅಲ್ಲ ಕಾಮ ಪ್ರಚೋದಕ ವಿಡಿಯೋ | ಶಿಲ್ಪಾ ಶೆಟ್ಟಿ
ಸಿಡಿಲು ಬಡಿದು 5 ಮಂದಿ ಸಾವು, 18 ಜನರಿಗೆ ಗಾಯ
121 ಅಶ್ಲೀಲ ವಿಡಿಯೋಗಳನ್ನು 12 ಲಕ್ಷ ರೂ. ಮಾರಾಟ ಮಾಡಲು ಮುಂದಾಗಿದ್ದ ರಾಜ್ ಕುಂದ್ರಾ!
ಅಮ್ಮ ಪ್ರತೀ ದಿನ ಜಗಳವಾಡುತ್ತಾಳೆ ಎಂದು ಕೊಂದ ಪುತ್ರ | ಹೆತ್ತವಳ ಕತ್ತು ಹಿಸುಕಿದ ಪುತ್ರ
ರೆಡ್ ಅಲಾರ್ಟ್: ಮುಂದಿನ 24 ಗಂಟೆಗಳಲ್ಲಿ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಧಾರಾಕಾರ ಮಳೆ