ಭಾರೀ ಪ್ರವಾಹದ ನಡುವೆಯೇ ಬಸ್ ನ್ನು ಸೇತುವೆ ದಾಟಿಸಿದ ಬಸ್ ಚಾಲಕ! - Mahanayaka
3:00 AM Wednesday 11 - December 2024

ಭಾರೀ ಪ್ರವಾಹದ ನಡುವೆಯೇ ಬಸ್ ನ್ನು ಸೇತುವೆ ದಾಟಿಸಿದ ಬಸ್ ಚಾಲಕ!

bus
14/07/2021

ಮಹಾರಾಷ್ಟ್ರ: ಪ್ರವಾಹದಲ್ಲಿ ಸೇತುವೆ ಮುಳುಗಿದ್ದರೂ ಹತ್ತಾರು ಪ್ರಯಾಣಿಕರನ್ನು ಹೊತ್ತ ಬಸ್ ನ್ನು ಚಾಲಕ ಸೇತುವೆ ದಾಟಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹಾರಾಷ್ಟ್ರದ ರಾಯಘಡದಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ. ಚಾಲಕನ ಈ ಹುಚ್ಚಾಟದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಗೆ  ಮಹಾಡ ನದಿಯಲ್ಲಿ ಭಾರೀ ಪ್ರವಾಹ ಏರ್ಪಟ್ಟಿದ್ದು, ಕೆಳ ಸೇತುವೆ ಮೇಲೆ ನೀರು ಹರಿದು ನದಿಗೂ ಸೇತುವೆಗೂ ವ್ಯತ್ಯಾಸವೇ ಇಲ್ಲ ಎಂಬಂತಾಗಿತ್ತು.

ಇಷ್ಟೊಂದು ಗಂಭೀರ ಪರಿಸ್ಥಿತಿಯಲ್ಲಿ ಬಸ್ ನಲ್ಲಿದ್ದ ಪ್ರಯಾಣಿಕರ ಸುರಕ್ಷತೆಯನ್ನು ಮರೆತು ಬಸ್ ಚಾಲಕ ಹೀರೋಯಿಸಂ ತೋರಿಸಿದ್ದು, ಪ್ರವಾಹದ ನಡುವೆಯೇ ಬಸ್ ನ್ನು ಸೇತುವೆ ದಾಟಿಸಿದ್ದಾನೆ.

ಈ ವಿಡಿಯೋ ನೋಡಿದವರ ಎದೆ ಝಲ್ಲೆನಿಸಿದ್ದು, ಪ್ರಯಾಣಿಕರ ಪ್ರಾಣಕ್ಕೆ ತೊಂದರೆಯಾಗಿದ್ದರೆ, ಯಾರು ಹೊಣೆ ಎಂದು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಇನ್ನಷ್ಟು ಸುದ್ದಿಗಳು:

ಪ್ರವಾಹದಲ್ಲಿ ಕೊಚ್ಚಿ ಹೋದ ತಂದೆ ಮಗಳು

ಹಾಸಿಗೆ ಹಿಡಿದಿದ್ದ ತಂದೆಯನ್ನು ಥಳಿಸಿ ಮನೆಯಿಂದ ಹೊರ ದಬ್ಬಿದ ಮಗ!

ಸಚಿವರಾಗುತ್ತಿದ್ದಂತೆಯೇ ಶೋಭಾ ಕರಂದ್ಲಾಜೆ ಮೊದಲು ಮಾಡಿದ ಕೆಲಸ ಏನು ಗೊತ್ತಾ? | ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆ

ಜನಸಂಖ್ಯೆ ನಿಯಂತ್ರಿಸಲು ಮುಂದಿನ 20 ವರ್ಷ ವಿವಾಹವನ್ನೇ ನಿಷೇಧಿಸಿ: ಯೋಗಿಗೆ ತಿರುಗೇಟು ನೀಡಿದ ಸಂಸದ

ಕಷ್ಟಕರ ಯೋಗದ ಭಂಗಿಗಳೂ ಈ 4ರ ಬಾಲಕಿಗೆ ಅತಿ ಸುಲಭ | ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಪ್ರಿಯದರ್ಶಿನಿ

ಇತ್ತೀಚಿನ ಸುದ್ದಿ