ಭರ್ಜರಿ ಕಲೆಕ್ಷನ್ ಮಾಡಿದ ಯುವರತ್ನಗೆ ಹೊಸ ಸಂಕಷ್ಟ!
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ “ಯುವರತ್ನ” ಸಿನಿಮಾ ಭರ್ಜರಿ ಪ್ರದರ್ಶನ ಕಂಡಿದ್ದು, ಅವರ ಹಿಂದಿನ ಎಲ್ಲ ಸಿನಿಮಾಗಳ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದೆ.
ಕೊವಿಡ್ ಸಂದರ್ಭದಲ್ಲಿ ಕೂಡ ಅಪ್ಪು ಅವರ ಯುವರತ್ನ ಮೊದಲ ದಿನವೇ 7ರಿಂದ 10 ಕೋಟಿ ರೂಪಾಯಿ ಗಳಿಸುವ ಮೂಲಕ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದೆ. ಕೊವಿಡ್ ಸಂಕಷ್ಟದ ನಡುವೆ ತೆರೆಕಂಡ ಧ್ರುವ ಸರ್ಜಾ ಅವರ ಪೊಗರು ಚಿತ್ರ 8.7 ಕೋಟಿ ಬಾಚಿತ್ತು. ಡಿ ಬಾಸ್ ದರ್ಶನ್ ಅವರ ರಾಬರ್ಟ್ ಚಿತ್ರ 14 ಕೋಟಿ ಬಾಚಿತ್ತು. ಇದೀಗ ಪುನೀತ್ ರಾಜ್ ಕುಮಾರ್ ಚಿತ್ರ ಕೂಡ ದಾಖಲೆ ಬರೆಯುವ ಮೂಲಕ ಕನ್ನಡ ಸ್ಟಾರ್ ನಟರ ಚಿತ್ರಗಳು ಭರ್ಜರಿಯಾಗಿ ಯಶಸ್ವಿ ಕಂಡಿದೆ.
ಈ ನಡುವೆ ಇನ್ನೊಂದು ಬ್ಯಾಡ್ ನ್ಯೂಸ್ ಏನೆಂದರೆ, ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಸರ್ಕಾರವು ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಸೀಟು ಭರ್ತಿಗೆ ಮಾತ್ರವೇ ಅವಕಾಶ ನೀಡಿದೆ. ಇದರಿಂದಾಗಿ ಯುವರತ್ನ ಚಿತ್ರಕ್ಕೆ ದೊಡ್ಡ ಸಂಕಷ್ಟ ಉಂಟಾಗಲಿದೆ ಎಂದು ಹೇಳಲಾಗಿದೆ. ಕೊವಿಡ್ ಮಾರ್ಗಸೂಚಿಗಳಿಂದಾಗಿ ಚಿತ್ರರಂಗದ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟುವಂತಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳು ಕಂಡು ಬಂದಿದೆ.