ಭವಿಷ್ಯದ ಸುಖಕ್ಕಾಗಿ ವಿದ್ಯಾರ್ಥಿ ದೆಸೆಯಲ್ಲಿ ಕಷ್ಟಪಡಲು ಸಿದ್ಧವಿರಬೇಕು: ಹಾಸ್ಯನಟ ಅರವಿಂದ ಬೋಳಾರ್ ಕಿವಿಮಾತು - Mahanayaka

ಭವಿಷ್ಯದ ಸುಖಕ್ಕಾಗಿ ವಿದ್ಯಾರ್ಥಿ ದೆಸೆಯಲ್ಲಿ ಕಷ್ಟಪಡಲು ಸಿದ್ಧವಿರಬೇಕು: ಹಾಸ್ಯನಟ ಅರವಿಂದ ಬೋಳಾರ್ ಕಿವಿಮಾತು

aravinda bolar
17/08/2022

ಭವಿಷ್ಯದ ಸುಖಕ್ಕಾಗಿ ವಿದ್ಯಾರ್ಥಿ ದೆಸೆಯಲ್ಲಿ ಕಷ್ಟಪಡಲು ಸಿದ್ಧವಿರಬೇಕು. ನೋವನ್ನು ಎದುರಿಸುವ ಶಕ್ತಿ ನಮ್ಮಲ್ಲಿರಬೇಕು. ಪ್ರತಿಭೆ ಇದ್ದರೆ, ವೇದಿಕೆ ಸಿಕ್ಕಾಗ ಸೂಕ್ತವಾಗಿ ಬಳಸಿಕೊಂಡರೆ  ಮಾತ್ರ ಕಲಾವಿದ ಬೆಳೆಯಲು ಸಾಧ್ಯ ಎಂದು ಖ್ಯಾತ ಚಲನಚಿತ್ರ ನಟ ಅರವಿಂದ ಬೋಳಾರ್ ಕಿವಿಮಾತು ಹೇಳಿದರು.

ಮಂಗಳೂರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳವಾರ ನಡೆದ ಪ್ರತಿಭಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅಪ್ಪ- ಅಮ್ಮನ, ಗುರುಹಿರಿಯರ ಆಶೀರ್ವಾದವಿಲ್ಲದೆ ಯಾವುದೂ ಸಾಧ್ಯವಿಲ್ಲ. ಅವರ ಬೈಗುಳ ನಮಗೆ ಶಾಪವಾಗದು, ಎಂದರು.

“ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುವ ಮನಸ್ಸು ಕಲಾವಿದನಿಗೆ ಅಗತ್ಯ. ತನ್ನ ಪ್ರದರ್ಶನದ ಕಡೆಗಷ್ಟೇ ಆತನ ಗಮನವಿರಬೇಕು,” ಎಂದು ಕಿವಿಮಾತು ಹೇಳಿದರು.

ತಮ್ಮ ಹಾಸ್ಯಮಯ ಸಂಭಾಷಣೆಯಿಂದ ನೆರೆದವರನ್ನು ರಂಜಿಸಿದ ಬೋಳಾರ್, ಹಾಸ್ಯ  ಆರೋಗ್ಯಕರವಾಗಿರಲಿ ಎಂದು ಹೇಳಲು ಮರೆಯಲಿಲ್ಲ.  ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲೆ ಡಾ. ಅನಸೂಯ ರೈ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತೆ ಆರಂಭವಾಗಿರುವುದು ಕಾಲೇಜಿನಗೆ ಲವಲವಿಕೆ ತಂದಿದೆ. ಇರುವ ಅಪಾರ ಅವಕಾಶವನ್ನು ವಿದ್ಯಾರ್ಥಿಗಳು ಬುದ್ಧಿವಂತಿಕೆಯಿಂದ ಬಳಸಿಕೊಳ್ಳಬೇಕು, ಎಂದರು.

ಲಲಿತ ಕಲಾ ಸಂಘದ ಸಹನಿರ್ದೇಶಕಿ ಡಾ. ಮೀನಾಕ್ಷಿ ಎಂ.ಎಂ. ಸಂಘದ ವಾರ್ಷಿಕ ವರದಿ ವಾಚಿಸಿದರು. ಸಾಹಿತ್ಯ, ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕ್ರೀಡಾ ವಿಭಾಗ ಮುಖ್ಯಸ್ಥ ಡಾ.ಕೇಶವಮೂರ್ತಿ ಟಿ, ಉಪನ್ಯಾಸಕರಾದ ಪರಿಣಿತ ಶೆಟ್ಟಿ, ಡಾ. ಸೌಮ್ಯ ಕೆ.ಬಿ. ಮೊದಲಾದವರು ಸಹಕರಿಸಿದರು.

ಅಂತಿಮ ಪದವಿ ವಿದ್ಯಾರ್ಥಿ ಪ್ರಣವ್ ಶೆಟ್ಟಿ ಉದ್ಘಾಟನಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ  ಧೀರಜ್, ಲಲಿತ ಕಲಾ ಸಂಘದ ಕಾರ್ಯದರ್ಶಿ ಅಪರ್ಣಾ ಎಸ್ ಶೆಟ್ಟಿ ಹಾಗೂ ಸಹಕಾರ್ಯದರ್ಶಿನಿ ಕಾವ್ಯಾ ಎನ್ ಕೆ, ಹಿರಿಯ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಂತರ 25 ಕ್ಕೂ ಅಧಿಕ ವಿದ್ಯಾರ್ಥಿ ತಂಡಗಳು ಸಾಂಸ್ಕೃತಿಕ ವೈವಿಧ್ಯ ಪ್ರದರ್ಶಿಸಿದವು. ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದ ಅಮಿತಾ ಮತ್ತು ಯಶಸ್ವಿ ಗಮನ ಸೆಳೆದರು.

mangalore vv

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ