ಭೀಕರ ರಸ್ತೆ ಅಪಘಾತ: 5 ವರ್ಷದ ಬಾಲಕಿ ಸಹಿತ ಮೂವರ ದಾರುಣ ಸಾವು - Mahanayaka

ಭೀಕರ ರಸ್ತೆ ಅಪಘಾತ: 5 ವರ್ಷದ ಬಾಲಕಿ ಸಹಿತ ಮೂವರ ದಾರುಣ ಸಾವು

11/12/2020

ಮೈಸೂರು: ಭೀಕರ ರಸ್ತೆ ಅಪಘಾತದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಮೈಸೂರು-ಬೆಂಗಳೂರು ರಸ್ತೆಯಲ್ಲಿ ನಡೆದಿದ್ದು, ಪುಟ್ಟ ಮಗುವೊಂದು ಗಾಯಗೊಂಡಿದೆ.


Provided by

ರಮೇಶ್(40), ಉಷಾ(36), ಮೋನಿಷಾ(5) ಅಪಘಾತದಲ್ಲಿ ಮೃತಪಟ್ಟವರಾಗಿದ್ದು, ಮೂರು ವರ್ಷದ ಸಿದ್ಧಾರ್ಥ್ ಗಾಯಗೊಂಡಿದ್ದು, ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರು ಮೈಸೂರಿನ ಟಿ.ಕೆ.ಬಡಾವಣೆ ನಿವಾಸಿಗಳು ಎಂದು ಹೇಳಲಾಗಿದೆ. ಘಟನೆ ಸಂಬಂಧ ಎನ್.ಆರ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಇನ್ನಷ್ಟು ಮಾಹಿತಿಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.


Provided by

ಇತ್ತೀಚಿನ ಸುದ್ದಿ