ಭೀಕರ ಅಪಘಾತ: ಲಾರಿಯಡಿಗೆ ಬಿದ್ದು ಸ್ಕೂಟರ್ ಸವಾರನ ದೇಹ ಛಿದ್ರಛಿದ್ರ | ಬೆಚ್ಚಿ ಬಿದ್ದ ಜನರು - Mahanayaka

ಭೀಕರ ಅಪಘಾತ: ಲಾರಿಯಡಿಗೆ ಬಿದ್ದು ಸ್ಕೂಟರ್ ಸವಾರನ ದೇಹ ಛಿದ್ರಛಿದ್ರ | ಬೆಚ್ಚಿ ಬಿದ್ದ ಜನರು

bikarnakatte mangalore accident
10/08/2021

ಮಂಗಳೂರು: ಭೀಕರ ರಸ್ತೆ ಅಪಘಾತವೊಂದರಲ್ಲಿ ಸ್ಕೂಟರ್ ಸವಾರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ  ನಂತೂರು ಸಮೀಪದ ಬಿಕರ್ನಕಟ್ಟೆ ಎಂಬಲ್ಲಿ ನಡೆದಿದ್ದು, ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರನ ದೇಹ ಛಿದ್ರಛಿದ್ರವಾಗಿದೆ.


Provided by

ಸದ್ಯ ದೊರಕಿದ ಮಾಹಿತಿಯ ಪ್ರಕಾರ, ಉಳಾಯಿಬೆಟ್ಟು ನಿವಾಸಿ ದಯಾನಂದ ಎಂಬವರು ಮೃತಪಟ್ಟ ಸವಾರ ಎಂದು ತಿಳಿದು ಬಂದಿದೆ.  ಬಿಕರ್ನಕಟ್ಟೆ ಸಮೀಪ ಲಾರಿ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ  ಸ್ಕೂಟರ್ ಸವಾರ ಲಾರಿಯಡಿಗೆ ಬಿದ್ದಿದ್ದು, ದಾರುಣವಾಗಿ ಸಾವನ್ನಪ್ಪಿದ್ದಾರೆ.

ಲಾರಿಯಡಿಗೆ ಸಿಲುಕಿದ ಕಾರಣ ಸ್ಕೂಟರ್ ಸವಾರನ ದೇಹ ಛಿದ್ರ ಛಿದ್ರವಾಗಿದೆ. ಘಟನಾ ಸ್ಥಳಕ್ಕೆ ಕದ್ರಿ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಸ್ಥಳದಲ್ಲಿ ನೂರಾರು ಜನರು ನೆರೆದಿದ್ದು, ಅಪಘಾತದ ಭೀಕರತೆ ಕಂಡು ಬೆಚ್ಚಿ ಬಿದ್ದಿದ್ದಾರೆ.

ಇನ್ನಷ್ಟು ಸುದ್ದಿಗಳು…

ಶೂಟಿಂಗ್ ವೇಳೆ ನಟ ಪ್ರಕಾಶ್ ರೈಗೆ ಏಟು | ಶಸ್ತ್ರ ಚಿಕಿತ್ಸೆಗೆ ಹೈದರಾಬಾದ್ ಗೆ ಶಿಫ್ಟ್

ದೇವಸ್ಥಾನದಿಂದ ಬರುತ್ತಿದ್ದ ಮಹಿಳೆಯನ್ನು ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ!

ಕರಾಟೆ ಬೆಲ್ಟ್ ನಿಂದ ತಾಯಿಯ ಕತ್ತು ಹಿಸುಕಿ ಕೊಂದ ಬಾಲಕಿ!

ಶೂಟಿಂಗ್ ವೇಳೆ ಫೈಟರ್ ಸಾವು: ಕೊನೆಗೂ ಮೌನ ಮುರಿದ ರಚಿತಾ ರಾಮ್

ಶಾಕಿಂಗ್ ನ್ಯೂಸ್: ಅತೀ ಹೆಚ್ಚು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಕೊರೊನಾ ವೈರಸ್!

ಇತ್ತೀಚಿನ ಸುದ್ದಿ