ಭ್ರಷ್ಟರು ಒಂದೇ ಪಕ್ಷಕ್ಕೆ ಸೀಮಿತವಾಗಿಲ್ಲ: ಮಾಜಿ ಸ್ಪೀಕರ್ ರಮೇಶ್ ಕುಮಾರ್ - Mahanayaka

ಭ್ರಷ್ಟರು ಒಂದೇ ಪಕ್ಷಕ್ಕೆ ಸೀಮಿತವಾಗಿಲ್ಲ: ಮಾಜಿ ಸ್ಪೀಕರ್ ರಮೇಶ್ ಕುಮಾರ್

ramesh kumar
28/04/2022

ವಿಜಯಪುರ:  ಭ್ರಷ್ಟರು ಒಂದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಎಲ್ಲಾ ಕಡೆಗಳಲ್ಲೂ ಇದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ನೀಡಿದ್ದು, ಬಹಳ ನಿರ್ಭಯವಾಗಿ ಹಾಗೂ ನಿರ್ದಾಕ್ಷಿಣ್ಯವಾಗಿ ಇದನ್ನು ನಾನು ಹೇಳುತ್ತೇನೆ ಎಂದಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮಗಳ ಜೊತೆಗೆ ಈ ಸಂಬಂಧ ಮಾತನಾಡಿದ ಅವರು,  ಭ್ರಷ್ಟರನ್ನು ಯಾವುದೇ ಒಂದು ಪಕ್ಷಕ್ಕೆ ಸೀಮಿತ ಮಾಡಬೇಡಿ, ಎಲ್ಲ ಕಡೆಯಲ್ಲೂ ಇದ್ದಾರೆ. ಆದರೆ ನಮ್ಮ ದೌರ್ಭಾಗ್ಯ ಎಲ್ಲಾ ಪಕ್ಷದಲ್ಲಿಯೂ ಅನೇಕ ವೇಳೆ ಅವರದ್ದೇ ಮೇಲುಗೈ ಸಾಧಿಸುತ್ತಾರೆ ಎಂದರು.

ಪಿಎಸ್ ಐ ಪರಿಕ್ಷೆಯಲ್ಲಿ ಅಕ್ರಮ ನೇಮಕಾತಿ ವಿಚಾರವಾಗಿ ಮಾತನಾಡಿದ ರಮೇಶ್​ ಕುಮಾರ್​, ಈ ಕುರಿತು ನನಗೆ ಸಂಪೂರ್ಣ ಮಾಹಿತಿ ಇಲ್ಲ, ಆತುರ ಪಟ್ಟು ವ್ಯಾಖ್ಯಾನ ಮಾಡಬಾರದು ಎಂದು ತಿಳಿಸಿದರು.

ಸಂವಿಧಾನದ ಅನ್ವಯ ಕಾನೂನು ಉಲ್ಲಂಘಿಸುವವರಿಗೆ ಶಿಕ್ಷೆ ಆಗಲೇ ಬೇಕು. ಆಗಲೇ ಇದೊಂದು ದೇಶ ಎಂದು ಆಗುವದು. ದೇಶ ಮುನ್ನಡಿಸಲು ಸಂವಿಧಾನ ಮಾಡಿದ್ದು, ಸಂವಿಧಾನದ ಪರಿಚ್ಚೇದದ ಅನ್ವಯ ವಿವಿಧ ಕಾನೂನು ಮಾಡಲಾಗಿದೆ. ಯಾವುದೇ ಕಾನೂನು ಯಾರೇ ಉಲ್ಲಂಘಿಸಿದಾಗ ಅವರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೆಲಸ ಮುಗಿಸಿ ಬರುತ್ತಿದ್ದ ಯುವತಿಯ ಮೇಲೆ ಆಟೋ ಚಾಲಕ, ಆತನ ಸ್ನೇಹಿತನಿಂದ ಅತ್ಯಾಚಾರ

ಪ್ರಾಣ ತೆಗೆದ ಕಣ್ಣಮುಚ್ಚಾಲೆ ಆಟ: ಬಾಲಕಿಯರಿಬ್ಬರ ದಾರುಣ ಸಾವು

ಒಟಿಟಿಯಲ್ಲಿ ಕೆಜಿಎಫ್ ಚಾಪ್ಟರ್ 2 ಸದ್ಯದಲ್ಲೇ ಬಿಡುಗಡೆ: ದಿನಾಂಕ ಪ್ರಕಟ

ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಮತ್ತೋರ್ವ ಗುತ್ತಿಗೆದಾರ!

ಒಟಿಟಿಯಲ್ಲಿ ಕೆಜಿಎಫ್ ಚಾಪ್ಟರ್ 2 ಸದ್ಯದಲ್ಲೇ ಬಿಡುಗಡೆ: ದಿನಾಂಕ ಪ್ರಕಟ

ಇತ್ತೀಚಿನ ಸುದ್ದಿ