ಶಿಕ್ಷಣ ಇಲಾಖೆಯ ಭ್ರಷ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಿ |  ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಮನವಿ - Mahanayaka

ಶಿಕ್ಷಣ ಇಲಾಖೆಯ ಭ್ರಷ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಿ |  ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಮನವಿ

07/11/2020

ಬೀದರ್: 2013-14 ನೇ ಸಾಲಿನಿಂದ ಸತತವಾಗಿ ಅನಧಿಕೃತ ಶಾಲೆಗಳ ಹಾವಳಿ ಹೆಚ್ಚಾಗಿದ್ದು ಈ ಎಲ್ಲ ಅನಧಿಕೃತ ಶಾಲೆಗಳ ವಿರುದ್ಧ ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಿದೆ.


Provided by

ಜಿಲ್ಲೆಯ ಶಿಕ್ಷಣ ಇಲಾಖೆಯಲ್ಲಿ 2013-14 ನೇ ಸಾಲಿನಿಂದ ಸತತವಾಗಿ ಅನಧಿಕೃತ ಶಾಲೆಗಳ ಹಾವಳಿ ಹೆಚ್ಚಾಗಿದ್ದು ಈ ಎಲ್ಲ ಅನಧಿಕೃತ ಶಾಲೆಗಳಿಗೆ ಶಿಕ್ಷಣ ಕಾಯ್ದೆ 1983 ನಿಯಮ 123 ರಂತೆ ಸದರಿ ಶಾಲೆಗಳ ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾವೆ ಹೂಡುವಂತೆ ದಿನಾಂಕ 01-10-2020 ರಂದು ಮಾನ್ಯ ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಬೀದರ ರವರು ಬೀದರ ತಾಲ್ಲೂಕಿನ 2013-14ನೇ ಸಾಲಿನಿಂದ 2017-18ನೇ ಸಾಲಿನ ವರೆಗೆ ಮತ್ತು 2019-20 ನೇ ಸಾಲಿನಲ್ಲಿ ಸಹ ಪ್ರಭಾರಿ ವಹಿಸಿಕೊಂಡು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಾರ್ಯನಿರ್ವಹಿಸಿದ ಮಹಮ್ಮದ ಗುಲ್ಶನ್ ಅವರಿಗೆ ಆದೇಶವನ್ನು ಕೊಟ್ಟಿದ್ದರು ಸಹ ಇವರ ಆದೇಶವನ್ನು ಪಾಲಿಸದ ಅನಧಿಕೃತ ಶಾಲೆಗಳಿಗೆ ಕುಮ್ಮಕು ನೀಡಿ ಭ್ರಷ್ಟಾಚಾರದಲ್ಲಿ ಮುಳುಗಿ ಅವುಗಳನ್ನು ತಲೆ ಎತ್ತಿ ನಿಲ್ಲುವಂತೆ ಮಾಡಿರುತ್ತಾರೆ ಅಂದು ಅವರು ತಿಳಿಸಿದರು.


Provided by

ಶಿಕ್ಷಣ ಕಾಯ್ದೆ ಅನುಸಾರ ಈಗಿನ ಉಪನಿರ್ದೇಶಕರ ಕಚೇರಿ ಬೀದರ ಜಿಲ್ಲೆಯಲ್ಲಿ ಇ. ಓ ಆಗಿ ಪ್ರಭಾರ ವಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಯನ್ನು ಕಾನೂನಿನ ಅಡಿಯಲ್ಲಿ ಕೂಡಲೇ ಹುದ್ದೆಯಿಂದ ಇವರನ್ನು ಅಮಾನತುಗೊಳಿಸಬೇಕು ಮತ್ತು ಇವರ ಅವಧಿಯಲ್ಲಿನ ಸಂಪೂರ್ಣ ಪ್ರಸ್ತಾವನೆಯನ್ನು ಎಸಿಬಿ ರವರಿಗೆ ಒಪ್ಪಿಸಬೇಕು ಹಾಗೂ ಅನಧಿಕೃತ ಶಾಲೆಗಳ ಆಡಳಿತ  ಮಂಡಳಿಯವರು ಸೂಕ್ತ ಕಾನೂನು ಕ್ರಮ  ಜರುಗಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಕಲಬುರ್ಗಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಬೀದರ ವತಿಯಿಂದ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಉಮೇಶಕುಮಾರ ಸ್ವಾರಳ್ಳಿಕರ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಸಂದೀಪ ಕಾಂಟೆ ಜಿಲ್ಲಾ ಸಂಘಟನಾ ಸಂಚಾಲಕರಾದ ನರಸಿಂಗ ಸಾಮ್ರಾಟ ಶಿವಕುಮಾರ ಅಜಾತಪುರ ಹಾಜರಿದ್ದರು.

ಇತ್ತೀಚಿನ ಸುದ್ದಿ