ಜೀವನ ಸಾಗಿಸಲು ಬೀದಿ ಬದಿ ಸಾಬೂನು ಮಾರಾಟ ಮಾಡುತ್ತಿರುವ ಖ್ಯಾತ ನಟಿ
ಚೆನ್ನೈ: ನರಸಿಂಹಂ, ಸತ್ಯಮೇವ ಜಯತೇ, ಪ್ರಜಾ, ದಿ ಫೈರ್, ನೋಟ್ ಬುಕ್ ನಂತಹ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಐಶ್ವರ್ಯ ಅವರಿಗೆ ಸದ್ಯ ಅವಕಾಶಗಳ ಕೊರತೆ ಶುರುವಾಗಿದ್ದು, ಇದೀಗ ಅವರು ಹೊಟ್ಟೆಪಾಡಿಗಾಗಿ ಸಾಬೂನು ಮಾರಾಟ ಮಾಡುತ್ತಿದ್ದಾರೆ.
ಕಲಾವಿದರ ಜೀವನ ಪರದೆ ಮೇಲೆ ಇರುವಂತೆ ಇರೋದಿಲ್ಲ ಅನ್ನೋದು ಗೊತ್ತೆ ಇದೆ. ರೀಲ್ ಲೈಫ್ ನಲ್ಲಿ ಕೋಟ್ಯಾಧಿಪತಿಯಾಗಿರುವವರು ರಿಯಲ್ ಲೈಫ್ ನಲ್ಲಿ ಜೀವನ ನಿರ್ವಹಣೆಗೂ ಕಷ್ಟ ಪಡ್ತಿರ್ತಾರೆ.
ಒಂದು ಕಾಲಕ್ಕೆ ಇವರು ರಜನಿಕಾಂತ್ ಹಾಗೂ ಮೋಹನ್ ಲಾಲ್ ಜೊತೆ ಹೀರೊಯಿನ್ ಆಗಿ ನಟಿಸಿದವರು ಎಂಬುದು ವಾಸ್ತವ. ತಮಿಳು, ಮಲಯಾಳಂ, ತೆಲುಗು ಹಾಗೂ ಕನ್ನಡ ಚಿತ್ರರಂಗದ ಟಾಪ್ ಹೀರೊಗಳೊಂದಿಗೆ ಹೀರೊಯಿನ್ ಆಗಿ ನಟಿಸಿದ್ದ ಒಂದು ಕಾಲದ ಮೇರು ನಟಿ ಐಶ್ವರ್ಯಾ ಭಾಸ್ಕರನ್ ಈಗ ಹೊಟ್ಟೆಪಾಡಿಗೆ ಬೀದಿಗಳಲ್ಲಿ ಸಾಬೂನು ಮಾರುತ್ತಿರುವುದು ಕಂಡು ಬಂದಿದೆ
ಆನ್ಲೈನ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಐಶ್ವರ್ಯಾ, ನನ್ನ ಬಳಿ ಸದ್ಯಕ್ಕೆ ಯಾವುದೇ ಉದ್ಯೋಗವಿಲ್ಲ, ಹಣವೂ ಇಲ್ಲ. ಬೀದಿಗಳಲ್ಲಿ ಸಾಬೂನು ಮಾರಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುವೆ ಎಂದಿದ್ದಾರೆ. ನನಗೆ ಸಿನಿಮಾ ಮಾಡಲು ಆಸಕ್ತಿಯಿದೆ. ಯಾರಾದರೂ ಸಿನಿಮಾಗಾಗಿ ಕರೆ ಮಾಡುತ್ತಾರೆ ಎಂಬ ಭರವಸೆಯಿಂದ ಕಾಯುತ್ತಿದ್ದೇನೆ ಎಂದು ಐಶ್ವರ್ಯ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಹೇಳಿಕೆಗೆ ಸ್ಪಷ್ಟನೆ ನೀಡುತ್ತ, ಗುಂಪು ಹತ್ಯೆ ಸಮರ್ಥಕರಿಗೆ ತಿರುಗೇಟು ನೀಡಿದ ಸಾಯಿ ಪಲ್ಲವಿ
ನಾಗರಿಕ ವಿಚಾರಣೆ ವೇದಿಕೆ ಮತ್ತು ಸಂಪೂರ್ಣ ಭ್ರಷ್ಟಾಚಾರ ನಿರ್ಮೂಲನೆ: ಪದಾಧಿಕಾರಿಗಳ ನೇಮಕ
ಸಿದ್ದರಾಮಯ್ಯ ರೋಹಿತ್ ಚಕ್ರ ತೀರ್ಥನ ಬಂಧನಕ್ಕೆ ಕರೆ ನೀಡಿದ್ದು ಅಸಂವಿಧಾನಿಕ: ನಟ ಚೇತನ್
ಪಿಯುಸಿ ಫಲಿತಾಂಶ: ದಕ್ಷಿಣ ಕನ್ನಡ ಮೇಲುಗೈ, ಚಿತ್ರದುರ್ಗಕ್ಕೆ ಕೊನೆಯ ಸ್ಥಾನ