ಈ ಸ್ಪರ್ಧಿಗಳು ಸ್ವರ್ಗಕ್ಕೆ ಹೋಗ್ತಾರಾ? ನರಕಕ್ಕೆ ಹೋಗ್ತಾರಾ? ಎಂದು ಕೇಳಿದ ಬಿಗ್ ಬಾಸ್: ಜನ ಶಾಕ್! - Mahanayaka
9:30 PM Tuesday 10 - December 2024

ಈ ಸ್ಪರ್ಧಿಗಳು ಸ್ವರ್ಗಕ್ಕೆ ಹೋಗ್ತಾರಾ? ನರಕಕ್ಕೆ ಹೋಗ್ತಾರಾ? ಎಂದು ಕೇಳಿದ ಬಿಗ್ ಬಾಸ್: ಜನ ಶಾಕ್!

big boss kannada season 11
29/09/2024

ಬಿಗ್ ಬಾಸ್ ಸೀಸನ್ 11 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಕಲರ್ಸ್ ಕನ್ನಡದಲ್ಲಿ ಕೆಲವು ಸ್ಪರ್ಧಿಗಳ ಹೆಸರು ಘೋಷಣೆ ಕೂಡ ಆಗಿದೆ. ಈ ನಡುವೆ ಕಲರ್ಸ್ ಕನ್ನಡ ಸಾಮಾಜಿಕ ಜಾಲತಾಣಗಳಲ್ಲಿ “ಈ ಅಭ್ಯರ್ಥಿ ಸ್ವರ್ಗಕ್ಕೆ ಹೋಗಿದ್ದಾರಾ? ನರಕಕ್ಕೆ ಹೋಗಿದ್ದಾರಾ?” ಎನ್ನುವ ಪ್ರಶ್ನೆ ವೀಕ್ಷಕರಲ್ಲಿ ಅಚ್ಚರಿಯನ್ನ ಸೃಷ್ಟಿಸಿದೆ.

ಹೌದು..! ಈ ಬಾರಿಯ ಬಿಗ್ ಬಾಸ್ ಶೋನಲ್ಲಿ ಸ್ವರ್ಗ ಮತ್ತು ನರಕ ಎಂಬ ಎರಡು ಕಲ್ಪನೆಯಲ್ಲಿ ಆಟಗಳು ನಡೆಯಲಿದೆ. ಶೋ ಆರಂಭದಲ್ಲೇ ಕೆಲವು ಸ್ಪರ್ಧಿಗಳು ಸ್ವರ್ಗ ವಿಭಾಗಕ್ಕೆ, ಇನ್ನು ಕೆಲವು ಅಭ್ಯರ್ಥಿಗಳನ್ನು ನರಕ ವಿಭಾಗಕ್ಕೆ ಕಳುಹಿಸಲಾಗುತ್ತದೆ. ಈ ಆಟದ ಬಗ್ಗೆ ಗೊತ್ತಿಲ್ಲದ ಸಾಕಷ್ಟು ಜನರು, ಇದೇನು ಅಭ್ಯರ್ಥಿಗಳು ಸ್ವರ್ಗಕ್ಕೆ ಹೋಗ್ತಾರಾ? ನರಕಕ್ಕೆ ಹೋಗ್ತಾರಾ ಅಂತ ಕೇಳುತ್ತಿದ್ದಾರೆ ಅಂತ ಒಂದು ಕ್ಷಣ ಶಾಕ್ ಆಗುತ್ತಿದ್ದಾರೆ.

ಅಂದ ಹಾಗೆ ಹಿಂದಿ ಬಿಗ್ ಬಾಸ್ ನಲ್ಲಿ ಈ ಹಿಂದೆಯೇ ಈ ಸ್ವರ್ಗ ಹಾಗೂ ನರಕದ ಆಟಗಳು ನಡೆದಿವೆಯಂತೆ. ಈ ಬಾರಿ ಅದೇ ಶೋ ಕನ್ನಡದಲ್ಲಿ ಕೂಡ ಆರಂಭವಾಗಲಿದೆ. ಬಿಗ್ ಬಾಸ್ ನಲ್ಲಿ ಈ ಬಾರಿ ಎರಡು ಮನೆಗಳಿರಲಿವೆ. ಒಂದು ಸ್ವರ್ಗ, ಇನ್ನೊಂದು ನರಕ, ಸ್ವರ್ಗದಲ್ಲಿರುವವರಿಗೆ ಸುಖದ ಸುಪ್ಪತ್ತಿಗೆ ಸಿಗಲಿದೆ. ಆದ್ರೆ ನರಕದಲ್ಲಿರುವವರಿಗೆ ಕಷ್ಟ ಕಾರ್ಪಣ್ಯಗಳು ಇವೆಯಂತೆ. ಆದ್ರೆ ಇದು ಇಡೀ ಶೋ ಇರಲಿದೆಯೇ ಅಥವಾ ಸ್ವಲ್ಪ ಸಮಯದ ಬಳಿಕ ಎಲ್ಲರನ್ನೂ ಒಂದೇ ಮನೆಗೆ ಶಿಫ್ಟ್ ಮಾಡುತ್ತಾರೋ ಗೊತ್ತಿಲ್ಲ. ಹಿಂದಿ ಬಿಗ್ ಬಾಸ್ ನಲ್ಲಿ 30 ದಿನಗಳ ವರೆಗೆ ಸ್ವರ್ಗ ನರಕ ಇತ್ತಂತೆ.

ಅಂತೂ ಇಂತು ಸತ್ತ ಮೇಲೆ ಇವರು ಸ್ವರ್ಗಕ್ಕೆ ಹೋಗ್ತಾರಾ ನರಕಕ್ಕೆ ಹೋಗ್ತಾರಾ ಅಂತ  ಕೇಳುವುದು ಸಹಜ ಆದ್ರೆ, ಸ್ಪರ್ಧಿಗಳನ್ನ ಇವರು ಸ್ವರ್ಗಕ್ಕೆ ಹೋಗ್ತಾರಾ, ನರಕಕ್ಕೆ ಹೋಗ್ತಾರಾ ಅಂತ ಕೇಳಿದ್ರೆ ಹೇಗಿರುತ್ತೆ, ಜನರು ಕ್ಷಣ ಕಾಲ ದಂಗಾಗುತ್ತಾರೆ ಅಷ್ಟೆ…!


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ