ಬಿಗ್ ಬಾಸ್ ಮನೆಯಲ್ಲಿ ಏಕಾಏಕಿ ನಾಪತ್ತೆಯಾದ ಸೋನು ಗೌಡ! - Mahanayaka
5:47 PM Wednesday 11 - December 2024

ಬಿಗ್ ಬಾಸ್ ಮನೆಯಲ್ಲಿ ಏಕಾಏಕಿ ನಾಪತ್ತೆಯಾದ ಸೋನು ಗೌಡ!

sonu gowda
25/08/2022

ಬಿಗ್ ಬಾಸ್ ಒಟಿಟಿ ಪ್ರೇಕ್ಷಕರಿಗೆ ಪ್ರತಿ ದಿನ ಒಂದೊಂದು ಶಾಕ್ ನೀಡುತ್ತಲೇ ಇದೆ. ಹೀಗಾಗಿ ಬಿಗ್ ಬಾಸ್  ದಿನದಿಂದ ದಿನಕ್ಕೆ ಪ್ರೇಕ್ಷಕರಲ್ಲಿ ಕುತೂಹಲವನ್ನು ಕೆರಳಿಸುವಲ್ಲಿ ಯಶಸ್ವಿಯಾಗುತ್ತಿದೆ. ಈ ನಡುವೆ ಏಕಾಏಕಿ ಬಿಗ್ ಬಾಸ್ ಸ್ಪರ್ಧಿ ಸೋನು ಗೌಡ ನಾಪತ್ತೆಯಾಗುವ ಮೂಲಕ ಸಹ ಸ್ಪರ್ಧಿಗಳಿಗೆ ಶಾಕ್ ನೀಡಿದ್ದಾರೆ.

ಮನೆಯಲ್ಲಿ ಎಲ್ಲರ ಜೊತೆಗಿದ್ದ ಸೋನು ಗೌಡ ಏಕಾಏಕಿ ನಾಪತ್ತೆಯಾಗಿದ್ದಾರೆ. ಈ ವೇಳೆ ಸಾನ್ಯಾ, ಸೋನು ಎಲ್ಲಿ ಎಂದು ಪ್ರಶ್ನಿಸಿದ್ದು, ಮನೆ ಮಂದಿ ಆರಂಭದಲ್ಲಿ ತಮಾಷೆಯಾಗಿ ಈ ವಿಚಾರವನ್ನು ತೆಗೆದುಕೊಂಡರಾದರೂ, ಆ ಬಳಿಕ ಆತಂಕಕ್ಕೊಳಗಾಗಿದ್ದಾರೆ.

ಸೋನು ಗೌಡ ಮನೆಯಲ್ಲಿ ಎಲ್ಲೂ ಕಾಣದೇ ಇದ್ದಾಗ ರೂಪೇಶ್, ಜಸ್ವಂತ್ ಮತ್ತು ನಂದಿನಿ ಓಡಿ ಹೋಗಿ ಹುಡುಕಾಡಿದ್ದಾರೆ. ಸೋನು ನಾಟಕವಾಡಬೇಡ, ಎಲ್ಲಿದ್ರು ಬಾ ಎಂದು ಕೂಗಿ ಕರೆದಿದ್ದಾರೆ. ಎಷ್ಟು ಬಾರಿ ಕೂಗಿ ಕರೆದರೂ ಸೋನು ಆಗಮಿಸದಿದ್ದಾಗ ಆತಂಕಕ್ಕೊಳಗಾಗಿದ್ದಾರೆ.

ಸ್ವಲ್ಪ ಹೊತ್ತಾದ ಬಳಿಕ ಸೋನು ಕನ್ಫೆಷನ್ ರೂಮ್ ನಿಂದ ಸೋನು ಬಂದಿದ್ದು, ಈ ವೇಳೆ ಸ್ಪರ್ಧಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಕಬಡ್ಡಿ ಆಟದ ವೇಳೆ ಸೋನು ಕೈಗೆ ಏಟು ಬಿದ್ದಿತ್ತು. ಹಾಗಾಗಿ ಬ್ಯಾಂಡೇಜ್ ಹಾಕಲು ಬಿಗ್ ಬಾಸ್ ಕರೆದಿದ್ದರು. ಹಾಗಾಗಿ ನಾನು ಹೋಗಿದ್ದೆ ಎಂದು ಸೋನು ಮನೆ ಮಂದಿಗೆ ನಡೆದ ಘಟನೆ ವಿವರಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ