‘ಸ್ವತಂತ್ರ ವೀರ್ ಸಾವರ್ಕರ್’ ಚಿತ್ರ ತಂಡಕ್ಕೆ ಭಾರೀ ನಿರಾಸೆ: ಪ್ರೇಕ್ಷಕನ ಮನಸೆಳೆಯಲು ವಿಫಲ!
ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಪಡೆದಿದ್ದ ಬಾಲಿವುಡ್ ನಟ ರಣದೀಪ್ ಹೂಡಾ ಅಭಿನಯದ ‘ಸ್ವತಂತ್ರ ವೀರ್ ಸಾವರ್ಕರ್’ ಸಿನಿಮಾ ಹೆಚ್ಚಿನ ವೀಕ್ಷಕರಿಲ್ಲದೇ ಬಾಕ್ಸ್ ಆಫೀಸ್ ನಲ್ಲಿ ಹಿನ್ನಡೆ ಅನುಭವಿಸಿದೆ, ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಚಿತ್ರ ತಂಡಕ್ಕೆ ಭಾರೀ ನಿರಾಸೆಯಾಗಿದೆ.
ಸಿನಿಮಾ ಮಾರ್ಚ್ 22ರಂದು ಥಿಯೇಟರ್ನಲ್ಲಿ ಬಿಡುಗಡೆ ಆಗಿದೆ. ರಣದೀಪ್ ಹೂಡಾ, ಅಂಕಿತಾ ಲೋಖಂಡೆ ಮತ್ತು ಅಮಿತ್ ಸಿಯಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಚಿತ್ರಕ್ಕೆ ಆರಂಭದಿಂದಲೂ ಮಾಧ್ಯಮಗಳಲ್ಲಿ ಭಾರೀ ಪ್ರಚಾರ ನೀಡಲಾಗಿತ್ತು. ಸಾಕಷ್ಟು ಚರ್ಚೆಗಳು ಕೂಡ ನಡೆದಿತ್ತು. ಆದರೆ, ಚಿತ್ರ ತಂಡದ ನಿರೀಕ್ಷೆ ತಕ್ಕ ಫಲ ಸಿಕ್ಕಿಲ್ಲ, ಮೊದಲ ದಿನ ಕೇವಲ 1.15 ಕೋಟಿ ರೂಪಾಯಿ ಕಲೆಕ್ಷನ್ ಗೆ ಸೀಮಿತವಾಯಿತು.
ಇದೇ ವೇಳೆ ಬಿಡುಗಡೆಯಾಗಿರುವ ಅಜಯ್ ದೇವಗನ್ ಹಾಗೂ ಆರ್. ಮಾಧವನ್ ನಟನೆಯ ‘ಶೈತಾನ್ʼ ಸಿನಿಮಾ ಸೂಪರ್ ಹಿಟ್ ಆಗಿದ್ದು, ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth