ಬಸ್ ಸ್ಟ್ಯಾಂಡ್ ನಲ್ಲಿ ಬಿಗ್ ಫೈಟ್: ಕಾರು ಚಾಲಕ ಮತ್ತು ಬಸ್ ಚಾಲಕನ ನಡುವೆ ಹೊಡೆದಾಟ

ಚಿಕ್ಕಮಗಳೂರು: ಓವರ್ ಟೇಕ್ ವಿಚಾರಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಹಾಗೂ ಕೆಎಸ್ ಆರ್ ಟಿಸಿ ಚಾಲಕನ ನಡುವೆ ಮಾರಾಮಾರಿ ನಡೆದ ಘಟನೆ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ.
KSRTC ಚಾಲಕ, ಕಾರು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಬಸ್ ಚಾಲಕನ ದಾಳಿಗೆ ಕಾರು ಚಾಲಕನಿಗೆ ಸರಿಯಾಗಿ ಏಟು ತಗಲಿದೆ.
ತಿರುವಿನಲ್ಲಿ ಏಕೆ ಓವರ್ ಟೆಕ್ ಮಾಡ್ತೀರಾ ಎಂದು ಕಾರು ಚಾಲಕ ಪ್ರಶ್ನೆ ಮಾಡಿದ್ದಾನೆ. ಇದರಿಂದ ಕೆರಳಿದ ಬಸ್ ಚಾಲಕ ಕೊಟ್ಟಿಗೆಹಾರದಲ್ಲಿ ಬಸ್ ನಿಲ್ಲಿಸಿ ಕಾರು ಚಾಲಕನೊಂದಿಗೆ ವಾಗ್ವಾದ ನಡೆಸಿದ್ದಾನೆ.
ಮಾತಿಗೆ ಮಾತು ಬೆಳೆದು ಕ್ಷುಲ್ಲಕ ಕಾರಣಕ್ಕೆ ಇಬ್ಬರು ಚಾಲಕರು ಹೊಡೆದಾಡಿದ್ದಾರೆ. ಸ್ಥಳೀಯರು ಬಸ್ ಚಾಲಕನನ್ನು ತಡೆದರೂ, ತೀವ್ರ ಕ್ರೋಧಗೊಂಡಿದ್ದ ಬಸ್ ಚಾಲಕ, ಕಾರು ಚಾಲಕನ ಮೇಲೆ ಹಿಗ್ಗಾಮುಗ್ಗಾ ಥಳಿಸಿರುವ ದೃಶ್ಯ ಸೆರೆಯಾಗಿದೆ.
ಚಾಲಕರಿಬ್ಬರ ಕಿತ್ತಾಟ ಹೊಡೆದಾಟ ಕಂಡು ಪ್ರಯಾಣಿಕರು ತಬ್ಬಿಬ್ಬಾಗಿದ್ದಾರೆ. ಕೆಲವರು ಕಾರು ಚಾಲಕನೇ ಮೊದಲು ಬಸ್ ಚಾಲಕನಿಗೆ ಥಳಿಸಿದ್ದಾನೆ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಬಸ್ ಚಾಲಕನ ವಿರುದ್ಧ ಕಾರು ಚಾಲಕ ದೂರು ನೀಡಲು ಮುಂದಾಗಿದ್ದಾನೆ ಎಂದು ಹೇಳಲಾಗಿದೆ.