ಸೀಟ್ ಗಾಗಿ ಬಿಗ್ ಫೈಟ್: ಚಾಲಕನ ಸೀಟ್ ಮೂಲಕ ಹತ್ತಿದ ನಾರಿಯರು, ಕಿಟಕಿಯಿಂದ ಹತ್ತಿದ ಪುರುಷರು!
ಚಾಮರಾಜನಗರ: ಶಕ್ತಿ ಯೋಜನೆ ಆರಂಭಗೊಂಡ ಬಳಿಕ ಬಸ್ ನಲ್ಲಿ ಸೀಟ್ ಹಿಡಿಯುವ ಹರಸಾಹಸ ಮುಂದುವರಿದಿದ್ದು ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರು ಬಸ್ ಸೀಟ್ ಗಾಗಿ ಸಾಹಸವನ್ನೇ ಮಾಡಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ದೇವರ ದರ್ಶನ ಮುಗಿಸಿ ಹಿಂತಿರುಗುವಾಗ ಕೊಳ್ಳೇಗಾಲದ ಬಸ್ ಪ್ರಯಾಣಿಕರು ಮುತ್ತಿಗೆ ಹಾಕಿ; ಚಾಲಕನ ಸೀಟ್ ಮೂಲಕ ನಾರಿಯರು ಬಸ್ ಹತ್ತಿದರೇ ಕಿಟಕಿ ಮೂಲಕ ಪುರುಷರು ಬಸ್ ಹತ್ತುವ ಸಾಹಸ ಮಾಡಿದ್ದಾರೆ.
ಇನ್ನು, ಬಿಳಿಗಿರಿರಂಗನ ಬೆಟ್ಟಕ್ಕೆ ತೆರಳಲು ಯಳಂದೂರಲ್ಲಿ ನೂಕು ನುಗ್ಗಲು ಉಂಟಾಗಿ ಬಸ್ ಬಾಗಿಲೇ ಕಿತ್ತುಬಂದ ಘಟನೆ ಭಾನುವಾರ ನಡೆದಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದ್ದು ಬಸ್ ಗಳ ಸಂಖ್ಯೆ ಅಷ್ಟೇ ಇರುವುದರಿಂದ ಬಸ್ ಸೀಟ್ ಹಿಡಿಯಲು ಪ್ರಯಾಣಿಕರು ಸಾಹಸ ಮಾಡುತ್ತಿದ್ದು ಇದು ಯಾತ್ರಸ್ಥಳಗಳಲ್ಲಿ ತುಸು ಹೆಚ್ಚೇ ಕಂಡುಬರುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw