ಮೊಟ್ಟೆ, ಚಿಕನ್ ಪ್ರಿಯರಿಗೆ ಬಿಗ್ ಶಾಕ್: ಗಗನಕ್ಕೇರಿದ ಬೆಲೆ
ಬೆಂಗಳೂರು: ಮೊಟ್ಟೆ ಚಿಕನ್ ಬೆಲೆ ಗಗನಕ್ಕೇರಿಬಾಡೂಟ ಪ್ರಿಯರಿಗೆ ಶಾಕ್ ಎದುರಾಗಿದೆ. ಚಿಕನ್ ಬೆಲೆ ವಿಥ್ ಸ್ಕೀನ್ ಗೆ ಕೆ.ಜಿಗೆ 236 ರೂ. ಹಾಗೂ ಚಿಕನ್ ವಿಥ್ ಔಟ್ ಸ್ಕೀನ್ ಕೆ.ಜಿಗೆ 266 ರೂ. ಆಗಿದೆ. ಜೊತೆಗೆ ಮಟನ್ ರೇಟ್ ಸಹ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ.
ಹಾಗೆಯೇ ಒಂದು ಮೊಟ್ಟೆ ಬೆಲೆ 6 ರೂ. ರಿಂದ 7 ರೂ. ಆಗಿದೆ. ಬೇಸಿಗೆಯಾಗಿದ್ದರಿಂದ ಕೋಳಿಗಳು ಸಾಯುತ್ತಿವೆ. ಜೊತೆಗೆ ಆಂಧ್ರಪ್ರದೇಶಕ್ಕೆ ರಾಜ್ಯದಿಂದ ಹೆಚ್ಚು ರಫ್ತಾಗಿದೆ. ಹೀಗಾಗಿ ಅಭಾವ ಉಂಟಾಗಿದೆ ಅಂತಾ ಹೇಳಲಾಗುತ್ತಿದೆ. ಹೀಗಾಗಿ ಮೊಟ್ಟೆ, ಚಿಕನ್ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿರುವುದು ವ್ಯಾಪಾರಿಗಳ ಅಳಲಾಗಿದೆ.
ಬೆಲೆ ಏರಿಕೆ ಆಗಿರುವುದರಿಂದ ಮೊಟ್ಟೆಯಿಂದ ಮಾಡುವ ನಾನ್ ವೆಜ್ ಖಾದ್ಯಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಕೂಡ ಇದ್ದು, ಮೊಟ್ಟೆ ರೇಟ್ ಏರಿದ ಪರಿಣಾಮ ಗ್ರಾಹಕರಿಗೆ ನೇರವಾಗಿ ತಟ್ಟಲಿದೆ. ಆದರೂ ಒಂದು ಡಜನ್ ಮೊಟ್ಟೆ ತೆಗೆದುಕೊಳ್ಳುವ ಕಡೆ 6 ಮೊಟ್ಟೆ ತಗೊಳುತ್ತಾ ಇದ್ದೇವೆ. ಚಿಕನ್ ಸಹ ಕಡಿಮೆ ಕೊಳ್ಳತ್ತಾ ಇದ್ದೇವೆ. ಮಟನ್ ಸಹ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ. ಬೆಲೆ ಕಡಿಮೆ ಆಗಬೇಕು ಎಂಬುದು ತಿನ್ನೋರ ಅಂಬೋಣ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw