ಬಿಗ್ ಶಾಕ್: ಭಾರೀ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ
ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬಾರಿ ಏರಿಕೆ ಕಂಡಿದ್ದು, ಮಾ. 22ರ ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್ ಪೆಟ್ರೋಲ್, ಡಿಸೇಲ್ ಬೆಲೆ 80 ಪೈಸೆ ಹೆಚ್ಚಳವಾಗಿದೆ.
ಬೆಲೆ ಏರಿಕೆಯಿಂದ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್‍ಗೆ 101.42 ರೂ. ಮತ್ತು ಡೀಸೆಲ್‍ಗೆ 85.80 ರೂ. ತಲುಪಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 96.21ರೂ., ಪ್ರತಿ ಲೀಟರ್ ಡೀಸೆಲ್‍ಗೆ 87.47ರೂ., ಮುಂಬೈನಲ್ಲಿ ಲೀಟರ್ ಪೆಟ್ರೋಲ್ 110.78ರೂ., ಡೀಸೆಲ್ 94.94ರೂ., ಕೋಲ್ಕತ್ತಾದಲ್ಲಿ ಪೆಟ್ರೋಲ್ 102.16 ರೂ. ಮತ್ತು ಡೀಸೆಲ್ 90.62 ರೂ., ಚೆನ್ನೈನಲ್ಲಿ ಪೆಟ್ರೋಲ್ ದರ 102.16ರೂ., ಡೀಸೆಲ್ ದರ 92.19 ರೂಪಾಯಿಗೆ ಏರಿಕೆಯಾಗಿದೆ.
ಕಳೆದ ವರ್ಷ ನವೆಂಬರ್‌ನಿಂದ ಈವರೆಗೂ ಕಚ್ಚಾ ತೈಲ ದರದಲ್ಲಿ ಶೇ. 25ರಷ್ಟು ಏರಿಕೆಯಾಗಿದೆ. ರಷ್ಯಾ, ಉಕ್ರೇನ್ ನಡುವಿನ ಸಂಘರ್ಷದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಬಾರಿ ಏರಿಕೆ ಕಂಡಿದ್ದು, ಈಗ ಭಾರತದ ಮೇಲೂ ಪರಿಣಾಮ ಬಿದ್ದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪ: ವಿಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು
ಎಸಿಬಿ ಶಾಕ್: ಬೆಳ್ಳಂಬೆಳಗ್ಗೆ ಬಿಡಿಎ ಬ್ರೋಕರ್‌ಗಳ ಮನೆ ಮೇಲೆ ದಾಳಿ
ಉಕ್ರೇನ್ ನಿಂದ ತಾಯ್ನಾಡಿಗೆ ಮರಳಿದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ