ಬಿಗ್ ಬಾಸ್ ಮನೆಯೊಳಗೆ ಬಿಗ್ ಫೈಟ್: ಪ್ರಶಾಂತ್ ಸಂಬರ್ಗಿ, ಚಕ್ರವರ್ತಿ ಚಂದ್ರಚೂಡ್ ನಡುವೆ ಜಟಾಪಟಿ
ಕನ್ನಡ ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ ಬಹಳ ಕುತೂಹಲಕಾರಿಯಾಗಿ ಮೂಡಿ ಬರುತ್ತಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಚಕ್ರವರ್ತಿ ಚಂದ್ರಚೂಡ್ ಇದೀಗ ಕೇಂದ್ರ ಬಿಂದುವಾಗಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಸೈಲೆಂಟಾಗಿದ್ದ ಚಕ್ರವರ್ತಿ ಚಂದ್ರಚೂಡ್, ಎರಡನೇ ಇನ್ನಿಂಗ್ಸ್ ನಲ್ಲಿ ವೈಲೆಂಟ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ವೊಂದನ್ನು ನೀಡಿದ್ದು, ಮನೆಯಲ್ಲಿರುವ 12 ತಂಡಗಳನ್ನು ಎರಡು ಟೀಂ ಆಗಿ ವಿಭಜಿಸಲಾಗಿದೆ. ಮಂಜು ಹಾಗೂ ಅರವಿಂದ್ ಎರಡು ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದೀಗ ತಂಡ ತಂಡಗಳ ನಡುವೆ ಸಮರವೇ ಇಲ್ಲ. ತಂಡಗಳ ಒಳಗಡೆಯೇ ಸಮರ ಆರಂಭವಾಗಿದೆ.
ಅರವಿಂದ್ ಟೀಮ್ ನಲ್ಲಿರುವ ಚಕ್ರವರ್ತಿ ಚಂದ್ರಚೂಡ್, ಟಾಸ್ಕ್ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ತಂಡದವರೇ ಆರೋಪಿಸುತ್ತಿದ್ದಾರೆ. ಆದರೆ ತಂಡದ ಸದಸ್ಯರ ವರ್ತನೆ ಸರಿ ಇಲ್ಲ ಎಂದು ಚಂದ್ರಚೂಡ್ ಆಕ್ರೋಶಕ್ಕೀಡಾಗಿದ್ದಾರೆ.
ಈ ವಿಚಾರ ಬಿಗ್ ಬಾಸ್ ಮನೆಯಲ್ಲಿ ತೀವ್ರ ಕಿರಿಕಿರಿಯನ್ನುಂಟು ಮಾಡಿದ್ದು, ತೀವ್ರವಾಗಿ ಆಕ್ರೋಶಗೊಂಡಿದ್ದ ಚಂದ್ರಚೂಡ್ ಅವರನ್ನು ಪ್ರಶಾಂತ್ ಸಂಬರ್ಗಿ ಅಪ್ಪಿಕೊಳ್ಳಲು ಬಂದಿದ್ದು, ಈ ವೇಳೆ ಚಕ್ರವರ್ತಿ, ಪ್ರಶಾಂತ್ ಸಂಬರ್ಗಿಯನ್ನು ಕೋಪದಿಂದ ಹಿಂದಕ್ಕೆ ತಳ್ಳಿದ್ದಾರೆ. ಈ ಪ್ರೊಮೋವನ್ನು ಕಲರ್ಸ್ ಕನ್ನಡ ಹಂಚಿಕೊಂಡಿದೆ.