ಅನುಪಮಾ ಒಳಗಡೆ ಬರಲಿ ಅನ್ನೋ ಒಂಥರಾ ಆಸೆ ಬಿಗ್ ಬಾಸ್ ಗೆ ಇತ್ತು ಎಂದ ಗುರೂಜಿ ವಿರುದ್ಧ ಸುದೀಪ್ ಗರಂ!
ಬಿಗ್ ಬಾಸ್ ನಲ್ಲಿ ಯಾರು ಗೆಲ್ಲಬೇಕು ಅನ್ನೋದು ಮೊದಲೇ ಫಿಕ್ಸ್ ಆಗಿರುತ್ತದೆ ಅನ್ನೋದು ಸಾರ್ವಜನಿಕವಾಗಿ ಈ ಹಿಂದಿನಿಂದಲೇ ಕೇಳಿ ಬರುತ್ತಿದ್ದ ಆರೋಪಗಳಾಗಿವೆ. ಇದೇ ವಿಚಾರವನ್ನು ಬಿಗ್ ಬಾಸ್ ಮನೆಯೊಳಗೆ ನೇರವಾಗಿ ಹೇಳಿದ ಆರ್ಯವರ್ಧನ್ ಗುರೂಜಿ ವಿರುದ್ಧ ಕಿಚ್ಚ ಸುದೀಪ್ ಕಿಡಿಕಾರಿದ್ದಾರೆ.
ಈ ಬಾರಿ ಟಾಪ್—2ನಲ್ಲಿ ಯಾವ ಸ್ಪರ್ಧಿಗಳು ಇರುತ್ತಾರೆ ಎಂದು ಕಿಚ್ಚ ಸುದೀಪ್ ಎಲ್ಲಾ ಸ್ಪರ್ಧಿಗಳಲ್ಲಿ ಪ್ರಶ್ನಿಸಿದಾಗ, ಅನುಪಮಾ ಟಾಪ್ ನಲ್ಲಿ ಇರುತ್ತಾರೆ, ಅನುಪಮಾ ಒಳಗಡೆ ಬರಲಿ ಅನ್ನೋ ಆಸೆ ಬಿಗ್ ಬಾಸ್ ಗೆ ಇದೆ ಎಂದು ಹೇಳಿದ್ದಾರೆ. ಈ ವೇಳೆ ಗರಂ ಆದ ಸುದೀಪ್ ಮಧ್ಯಪ್ರವೇಶಿಸಿ ಅದೆಲ್ಲಾ ಮಾತನಾಡಬೇಡಿ ಎಂದಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಗುರೂಜಿ, ಅನುಪಮಾ ಅವರನ್ನು ಮನೆಯ ಒಳಗಡೆ ಕರೆಸುತ್ತಾರಲ್ಲ, ಅದರಲ್ಲೇ ಗೊತ್ತಾಗುತ್ತದೆ. ಇದೊಂದು ಥರ ಮ್ಯಾಚ್ ಫಿಕ್ಸಿಂಗ್ ಎಂದಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಅನ್ನುತ್ತಿದ್ದಂತೆಯೇ ಆಕ್ರೋಶಗೊಂಡ ಕಿಚ್ಚ ಸುದೀಪ್, ನಿಮ್ಮ ಮಾತಿನ ಬಗ್ಗೆ ಗಮನ ಇರಲಿ ಎಂದಿದ್ದಾರೆ. ಆದರೆ ಮತ್ತೆ ತಮ್ಮ ಆರೋಪ ಮುಂದುವರಿಸಿದ ಗುರೂಜಿ, ಅದನ್ನೆಲ್ಲಾ ಯೋಚನೆ ಮಾಡಿ ಹೇಳಬೇಕಲ್ವಾ? ಎಂದರು. ಈ ವೇಳೆ ಮತ್ತಷ್ಟು ಆಕ್ರೋಶಗೊಂಡ ಕಿಚ್ಚ ಸುದೀಪ್, ವಾಟ್ ಇಸ್ ದ ಮ್ಯಾಚ್ ಫಿಕ್ಸಿಂಗ್? ಎಂದು ಆರ್ಯವರ್ಧನ್ ವಿರುದ್ಧ ಕೂಗಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka