ನಟಿಯ ತುಟಿ ನೋಡಿ ಭವಿಷ್ಯ ಹೇಳಿದ ಆರ್ಯವರ್ಧನ್ ಗುರೂಜಿ
ಮುಖ ನೋಡಿ ಭವಿಷ್ಯ ಹೇಳೋದು ಕೇಳಿದ್ದೇವೆ, ಕೈ ನೋಡಿ ಭವಿಷ್ಯ ಹೇಳೋದು ಕೇಳಿದ್ದೇವೆ, ಸಂಖ್ಯೆಗಳ ಭವಿಷ್ಯಗಳ ಬಗ್ಗೆ ಕೇಳಿದ್ದೇವೆ ಆದ್ರೆ, ಬಿಗ್ ಬಾಸ್ ಮನೆಯೊಳಗೆ ಆರ್ಯವರ್ಧನ್ ಗುರೂಜಿ, ನಟಿ ಅಮೂಲ್ಯ ತುಟಿ ನೋಡಿ ಭವಿಷ್ಯ ಹೇಳಿದ ಘಟನೆ ನಡೆದಿದೆ. ಇದೇ ವೇಳೆ ಪುರುಷ ಸ್ಪರ್ಧಿಗಳು ನಮ್ಮ ತುಟಿ ನೋಡಿ ಭವಿಷ್ಯ ಹೇಳಿ ಎಂದಾಗ, ಗುರೂಜಿ ನೆಗೆಟಿವ್ ಭವಿಷ್ಯ ಹೇಳಿದ್ರು.
ಇಂತಹದ್ದೊಂದು ಹಾಸ್ಯದ ಸನ್ನಿವೇಶಕ್ಕೆ ಬಿಗ್ ಬಾಸ್ ಮನೆ ಸಾಕ್ಷಿಯಾಯಿತು. ನಟಿ ಅಮೂಲ್ಯ ತುಟಿ ನೋಡಿದ ಗುರೂಜಿ ಆರ್ಯವರ್ಧನ್, ನಿಮ್ಮ ತುಟಿ ಚೂಪಾಗಿದೆ, ಹೀಗಿದ್ದರೆ, ಒಳ್ಳೆಯದು. ಎಲ್ಲರೂ ನಿಮ್ಮನ್ನು ಇಷ್ಟಪಡುತ್ತಾರೆ ಎಂದು ಭವಿಷ್ಯ ಬಿಟ್ಟಿದ್ದಾರೆ. ಈ ವೇಳೆ ಸಮೀಪದಲ್ಲಿದ್ದ ರಾಕೇಶ್ ಅಡಿಗ ನನ್ನ ತುಟಿ ನೋಡಿ ಭವಿಷ್ಯ ಹೇಳಿ ಎಂದು ಗುರೂಜಿಯನ್ನು ಕೇಳಿದ್ದಾರೆ. ಈ ವೇಳೆ ಉಲ್ಟಾ ಹೊಡೆದ ಗುರೂಜಿ, ನಿನ್ನ ಹಿಂದೆ ಯಾರೂ ಬರಲ್ಲ ನೀನೇ ಎಲ್ಲರ ಹಿಂದೆ ಹೋಗ್ತಿ ಎಂದು ಭವಿಷ್ಯ ಹೇಳಿದ್ದಾರೆ.
ಗುರೂಜಿಯ ಭವಿಷ್ಯ ಕೇಳಿ ಮನೆ ಮಂದಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ. ಇದೇ ವೇಳೆ, ನನ್ದೂ ಒಂದು ಇರ್ಲಿ ಅಂತ ಅರುಣ್ ಸಾಗರ್ ಅವರು ನನ್ನ ತುಟಿ ನೋಡಿ ಭವಿಷ್ಯ ಹೇಳಿ ಎಂದಿದ್ದಾರೆ. ಈ ವೇಳೆ ಗುರೂಜಿ ಮೀಸೆ ಬೋಳಿಸಿಕೊಂಡು ಬನ್ನಿ ಎಂದು ಹೇಳಿ ತುಟಿ ಭವಿಷ್ಯದ ಚರ್ಚೆಗೆ ಅಂತ್ಯ ಹಾಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka