ನಾನು ನನ್ನ ಖಾಸಗಿ ಬದುಕಿನಲ್ಲಿ ಇರೋದೇ ಹೀಗೆನೇ: ಚೈತ್ರಾ ಕುಂದಾಪುರ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಕನ್ನಡ ಸೀಸನ್ 11(Bigg Boss Kannada Season 11)ರಲ್ಲಿ ಮೊದಲ ವಾರವೇ ಚೈತ್ರಾ ಕುಂದಾಪುರ ನಾಮಿನೇಟ್ ಆಗಿದ್ದಾರೆ. ನಾಮಿನೇಟ್ ಆಗಿರುವುದಕ್ಕೆ ಚೈತ್ರಾ ಕುಂದಾಪುರ(Chaithra Kundapura) ಹೆಚ್ಚು ಮಾತನಾಡಿರುವುದೇ ಕಾರಣ ಎಂಬ ವಿಚಾರಕ್ಕೆ ಅವರು ದೀರ್ಘವಾಗಿ ಉತ್ತರಿಸಿದರು.
ನಾನು ಅವಶ್ಯಕತೆಗಿಂತ ಜಾಸ್ತಿ ಮಾತಾಡ್ತಿನಿ ಅಂತ ಎಲ್ಲರಿಗೂ ಅನ್ನಿಸುತ್ತದೆ. ಅದು ಈ ಮನೆಯಲ್ಲಿ ಅಂತಲ್ಲ. ನನ್ನ ಖಾಸಗಿ ಬದುಕಿನಲ್ಲೂ ಹಾಗೇ ಇದ್ದೇನೆ. ನಾನೇನೂ ಇಲ್ಲಿಗೆ ನಾಟಕ ಮಾಡೋಕೆ ಬಂದಿಲ್ಲ ಮತ್ತು ನಾಟಕ ಮಾಡೋಕೂ ಸಾಧ್ಯನೂ ಇಲ್ಲ ಎಂದು ಅವರು ಹೇಳಿದರು.
ನಾನು ಇರೋದೇ ಹೀಗೆ. ನಾನು ಬಿಗ್ ಬಾಸ್‌ಗೆ ಬಂದಿದ್ದೇನೆ. ಯಾರೋ ನಾಮಿನೇಟ್ ಮಾಡ್ತಾರೆ ಅನ್ನೋ ಭಯಕ್ಕೆ ನನಗೆ ಮಾತಾಡದೇ ಇರೋದಕ್ಕಂತೂ ಸಾಧ್ಯವಿಲ್ಲ ಅಂತ ಹೇಳಿದರು.
ಸ್ವರ್ಗವಾಸಿಗಳಿಗೆ ನರಕವಾಸಿಗಳು ಗುಲಾಮರಲ್ಲ. ರೂಲ್ ಬುಕ್ ಅಲ್ಲಿ ಏನಿದೆ? ಸ್ವರ್ಗವಾಸಿಗಳ ಬಳಿ ಇರುವ ವಸ್ತುಗಳನ್ನು ತಗೋಬಾರದು ಅಂತ ಹೇಳಿದ್ದಾರೆ. ಹಂಗಂತ, ನೂರು ದಿನ ಹಾಗೇ ಬಿದ್ಕೊಂಡಿರ್ಲಾ? ಇಲ್ಲ, ನಾನು ಸ್ವರ್ಗಕ್ಕೆ ಬರಬೇಕು. ಹಾಗೇ ನಾನು ಬರಬೇಕು ಎಂದರೆ, ನಿಮ್ಮನ್ನೆಲ್ಲಾ ದಾರಿತಪ್ಪಿಸಬೇಕು, ವಸ್ತುಗಳನ್ನು ತಗೋಬೇಕು. ಆ ಕೆಲಸವನ್ನು ನಾನು ಮಾಡಿದ್ದೇನೆ ಮತ್ತು ಅದರಲ್ಲಿ ನಾನು ಗೆದ್ದಿದ್ದೇನೆ ಎಂದು ಸ್ವರ್ಗವಾಸಿಗಳಿಗೆ ಬಿಸಿಮುಟ್ಟಿಸಿದರು.
ಟಾಸ್ಕ್ ಅಲ್ಲಿ ಓಡುವಾಗ ಒಬ್ಬ ಬಿದ್ದ ಅಂದ್ರೆ, ನಾನು ಬಿದ್ದವನನ್ನು ಎತ್ತಬೇಕಾ ಅಥವಾ ಗುರಿ ಮುಟ್ಟಬೇಕಾ ಅಂತ ಪ್ರಶ್ನೆ ಬಂದರೆ, ನಾನು ಗುರಿ ಮುಟ್ಟೋದಕ್ಕೆ ಗಮನ ಕೊಡ್ತಿನಿ. ಗುರಿ ಮುಟ್ಟಿದ ಮೇಲೆ ಬಿದ್ದವನನ್ನು ಕೈಹಿಡಿದು ಮೇಲೆ ಎತ್ತುತ್ತಿನಿ ಎಂದಿದ್ದಾರೆ.
ನಾನು ಕ್ಲೀನ್ ಮಾಡಿದ್ದ ಬಾತ್ ರೂಮ್ ಅನ್ನು ಸುರೇಶ್ ಅವರಿಂದ ಇನ್ನೊಮ್ಮೆ ಕ್ಲೀನ್ ಮಾಡಿಸಿದ್ದಾರೆ. ಈ ರೀತಿ ಮಾಡೋರಿಗೆ ಮಾನವೀಯತೆ ಬೇಕಲ್ಲ? ಅವರಿಗೆ ಆ ಮಾನವೀಯತೆ ಇಲ್ಲ ಅಂದಮೇಲೆ ನನಗೆ ಯಾಕೆ ಇರಬೇಕು ಎಂದು ಪ್ರಶ್ನಿಸಿದ್ದಾರೆ.
ನಾನಿಲ್ಲಿ ಚೈತ್ರಾ ಆಗಿ ಬಂದಿದ್ದೇನೆ. ಚೈತ್ರಾ ಕುಂದಾಪುರ ಆಗಿ ಅಲ್ಲ. ನಾನು ಇರುವುದೇ ಹೀಗೆ. ಇಲ್ಲಿವವರು ಮಾತು ನಿಲ್ಲಿಸು ಅಂತ ಹೇಳಿದ್ದಾರೆ. ಇದ್ದಿದ್ದರಲ್ಲಿ ನಾನು ಬಹಳ ಕಡಿಮೆ ಮಾತಾಡಿದ್ದೇನೆ. ನಾನು ಮಾತನಾಡೋಕೆ ಶುರು ಮಾಡಿದರೆ ಮಾತು ನಿಲ್ಲಿಸಲ್ಲ ಎಂದಿದ್ದಾರೆ.
ಒಟ್ಟಿನಲ್ಲಿ ಬಿಗ್ ಬಾಸ್ ಮನೆಗೆ ಹೋದ ಚೈತ್ರಾ ತಮ್ಮ ಭಾಷಣ ಕಲೆಯನ್ನು ಪ್ರತಿಸ್ಪರ್ಧಿಗಳ ಮೇಲೆ ಚೆನ್ನಾಗಿ ಬಳಸ್ತಾ ಇದ್ದಾರೆ. ಚೈತ್ರಾ ಜೊತೆಗೆ ಮಾತನಾಡಲಾಗದೇ ಸಹ ಸ್ಪರ್ಧಿಗಳು ಪರದಾಡುವಂತಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: