ಬಿಗ್ ಬಾಸ್ ಸೀಸನ್ 8 ಮುಗಿದ ಬೆನ್ನಲ್ಲೇ ಮತ್ತೆ 7 ದಿನಗಳವರೆಗೆ ನಡೆಯಲಿದೆ ಬಿಗ್ ಬಾಸ್ ಕಾರ್ಯಕ್ರಮ!

bigg boss mini season kannada
14/08/2021

ಬೆಂಗಳೂರು: ಬಿಗ್ ಬಾಸ್ ಸೀಸನ್ 8ಕ್ಕೆ ತೆರೆ ಬಿದ್ದರೂ, ಅದರ ಬೆನ್ನಲ್ಲೇ ಮತ್ತೆ 7 ದಿನಗಳ ಕಾಲ ಬಿಗ್ ಬಾಸ್ ಮಿನಿ ಸೀಸನ್ ಆರಂಭವಾಗಿದ್ದು, 7 ದಿನಗಳ ಕಾಲ ವಿವಿಧ ಕಿರುತೆರೆ ನಟ-ನಟಿಯರು, ನಿರೂಪಕರನ್ನೊಳಗೊಂಡ ಶೋ ಆರಂಭವಾಗಿದೆ.

ಸದ್ಯ ಈ ಕಾರ್ಯಕ್ರಮದಲ್ಲಿ 15 ಸದಸ್ಯರು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ. ನಾಮಿನೇಶನ್, ಎಲಿಮಿನೇಶನ್ ಹೊರತುಪಡಿಸಿದರೆ, ಉಳಿದೆಲ್ಲ ಮನರಂಜನೆಗಳು ಈ ಬಿಗ್ ಬಾಸ್ ಮಿನಿ ಸೀಸನ್  ಕಾರ್ಯಕ್ರಮದಲ್ಲಿ ಇರಲಿದೆ. ಯಾರು ಉತ್ತಮ ಟಾಸ್ಕ್ ನಿರ್ವಹಿಸುತ್ತಾರೆ. ಯಾರು ಚೆನ್ನಾಗಿ ಅಡುಗೆ ಮಾಡುತ್ತಾರೆ. ಎಲ್ಲವನ್ನು ಮನೆಯ ಸದಸ್ಯರೇ ಆಯ್ಕೆ ಮಾಡಲಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ಎಲ್ಲ ವ್ಯವಸ್ಥೆಗಳು ಇರುವ ಕಾರಣ.  ಮಿನಿ ಸೀಸನ್ ಗೂ ಇದೇ ಮನೆಯನ್ನು ಬಳಸಿಕೊಳ್ಳಲಾಗಿದೆ ಎಂದು ಕಲರ್ಸ್ ಕನ್ನಡ ಹೆಡ್ ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ. ಈ ಮಿನಿ ಸೀಸನ್ ನಲ್ಲಿ ನಿರೂಪಕ ಅಕುಲ್ ಬಾಲಾಜಿ, ಭವ್ಯಾ ಗೌಡ, ತ್ರಿವಿಕ್ರಮ್, ಚಂದನಾ ಅನಂತ ಕೃಷ್ಣ, ನಯನಾ ನಾಗರಾಜ್, ಕಿರಣ್ ರಾಜ್, ಗಗನ್ ಚಿನ್ನಪ್ಪ, ಪ್ರೇರಣಾ ಕಂಬಂ ಮೊದಲಾದ ಸ್ಪರ್ಧಿಗಳಾಗಿದ್ದಾರೆ.

ಇಂದು   4 ಗಂಟೆಗೆ ಬಿಗ್ ಬಾಸ್ ಮಿನಿ ಸೀಸನ್ ಗೆ ಅದ್ಧೂರಿ ಚಾಲನೆ ಸಿಗಲಿದೆ ಈಗಾಗಲೇ, ಪ್ರೊಮೋಗಳಲ್ಲಿ ಸ್ಪರ್ಧಿಗಳ, ಡಾನ್ಸ್ , ಸಿಂಗಿಂಗ್ ಗಳು ಸದ್ದು ಮಾಡಿವೆ. ಕಿಚ್ಚ ಸುದೀಪ್ ಕೂಡ ವೇದಿಕೆಗೆ ಎಂಟ್ರಿಕೊಡಲಿದ್ದಾರೆ.

ಇನ್ನಷ್ಟು ಸುದ್ದಿಗಳು…

ಆರೆಸ್ಸೆಸ್, ಬಿಜೆಪಿ ಕಾರ್ಯಕರ್ತರ ಮೇಲಿನ ಪ್ರಕರಣ ವಾಪಸ್ ಪಡೆಯುತ್ತೇವೆ | ದಲಿತ ಸಿಎಂ ಮಾಡ್ತೇವೆ- ಸಚಿವ ಈಶ್ವರಪ್ಪ ಹೇಳಿಕೆ

ಬಿಟ್ರೋಟ್ ಬಳಕೆಯಿಂದ ನಮ್ಮ ಆರೋಗ್ಯಕ್ಕೆ ಏನೇನು ಲಾಭ ಇದೆ ಗೊತ್ತಾ?

ಗಾಂಜಾ, ಕುಡಿದು ಗಾಡಿ ಚಲಾಯಿಸಿ ಪ್ರಾಣ ಬಲಿ ಪಡೆಯುವುದು ಸಿ.ಟಿ ರವಿ, ಬಿಜೆಪಿ ಸಂಸ್ಕೃತಿ | ರಾಮಲಿಂಗಾರೆಡ್ಡಿ ತಿರುಗೇಟು

ಕಂಠಪೂರ್ತಿ ಕುಡಿದು ರಸ್ತೆಯ ಮಧ್ಯೆ ಯುವತಿ ಮಾಡಿದ ಕೆಲಸ ಏನು ಗೊತ್ತಾ? | ವಿಡಿಯೋ ವೈರಲ್

ನನ್ನ ಸ್ನೇಹಿತರ ಲೈಂಗಿಕ ಬಯಕೆ ತೀರಿಸು ಎಂದು ಪ್ರಿಯಕರನಿಂದಲೇ ಬ್ಲ್ಯಾಕ್ ಮೇಲ್ | 40 ಅಡಿ ಎತ್ತರದಿಂದ ನದಿಗೆ ಹಾರಿದ ಯುವತಿ!

ಇತ್ತೀಚಿನ ಸುದ್ದಿ

Exit mobile version