ಬಿಗ್ ಬಾಸ್ ಸ್ವಾಮೀಜಿ ಸ್ವಗೃಹದಲ್ಲಿಯೇ ಸಾವು - Mahanayaka
12:48 AM Monday 16 - September 2024

ಬಿಗ್ ಬಾಸ್ ಸ್ವಾಮೀಜಿ ಸ್ವಗೃಹದಲ್ಲಿಯೇ ಸಾವು

03/02/2021

ಮುಂಬೈ:  ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿದ್ದ ದೇವಮಾನವ ಓಂ ಸ್ವಾಮಿ ನಿಧನರಾಗಿದ್ದು, ತಮ್ಮ 63ನೇ ವಯಸ್ಸಿನಲ್ಲಿ ಉತ್ತರ ಪ್ರದೇಶದ ಘಾಜಿಯಾಬಾದ್ ನ ಸ್ವಗೃಹದಲ್ಲಿ ಅವರು ನಿಧನರಾಗಿದ್ದಾರೆ.

ಬಿಗ್ ಬಾಸ್ ಸೀಸನ್ 10ರಲ್ಲಿ ಈ ಸ್ವಾಮೀಜಿ ಸ್ಪರ್ಧಿಸಿದ್ದರು. ಸ್ವಾಮೀಜಿ ಪಾರ್ಶ್ವವಾಯುವಿಗೆ ತುತ್ತಾಗಿದ್ದರು ಎಂದು ಅವರ ಸ್ನೇಹಿತ ಮುಖೇಶ್ ಅವರ ಪುತ್ರ ತಿಳಿಸಿದ್ದಾರೆ.

ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ ಈ ಸ್ವಾಮೀಜಿ ಹಲವು ವಿವಾದಗಳಿಗೆ ಸುದ್ದಿಯಾಗಿದ್ದರು. ಪ್ರತಿಸ್ಪರ್ಧಿ ಮಹಿಳೆಯರೊಂದಿಗೆ ಜಗಳವಾಡಿ ಥಳಿತಕ್ಕೂ ಒಳಗಾಗಿದ್ದರು. ಇದಲ್ಲದೇ ಸಹ ಸ್ಪರ್ಧಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ ಇವರನ್ನು ಶೋನಿಂದ ಹೊರ ಹಾಕಲಾಗಿತ್ತು.


Provided by

ಇತ್ತೀಚಿನ ಸುದ್ದಿ