ಬಿಹಾರದಲ್ಲಿ ಇಂದು ಚುನಾವಣೆ: ಕೊರೊನಾ ಸಂದರ್ಭದಲ್ಲಿ ಮತದಾನ ಹೇಗೆ ನಡೆಯಲಿದೆ ಗೊತ್ತಾ? - Mahanayaka
4:28 PM Wednesday 11 - December 2024

ಬಿಹಾರದಲ್ಲಿ ಇಂದು ಚುನಾವಣೆ: ಕೊರೊನಾ ಸಂದರ್ಭದಲ್ಲಿ ಮತದಾನ ಹೇಗೆ ನಡೆಯಲಿದೆ ಗೊತ್ತಾ?

28/10/2020

ಪಾಟ್ನಾ: ಬಿಹಾರ ರಾಜ್ಯದ 243 ವಿಧಾನಸಭಾ ಕ್ಷೇತ್ರಗಳಿಗೆ ಮೂರು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಇಂದು 71 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ.


 ಸುಮಾರು 2 ಕೋಟಿಗೂ ಅಧಿಕ ಮತದಾರರು ಒಟ್ಟು 1066 ಅಭ್ಯರ್ಥಿಗಳಿಗೆ ಮತದಾನ ಮಾಡಲಿದ್ದಾರೆ. ಕೊರೊನಾ ಸೋಂಕಿನ ನಡುವೆಯೂ ಜನರ ಸುರಕ್ಷತೆಗಾಗಿ ಕೊವಿಡ್ ಮಾರ್ಗಸೂಚಿಯ ಪ್ರಕಾರ ಮತದಾನಕ್ಕೆ ಅವಕಾಶ ನೀಡಲಾಗಿದೆ.


ಒಂದು ಮತಗಟ್ಟೆಯಲ್ಲಿ 1000ದಿಂದ 1600 ಮತದಾರರಿಗೆ ಮಾತ್ರ ಅವಕಾಶ ನೀಡಲಾಗಿದೆ.  80 ವರ್ಷ ಮೇಲ್ಪಟ್ಟವರಿಗೆ ಪೋಸ್ಟ್ ಕಾರ್ಡ್ ಮೂಲಕ ಮತದಾನ ಮಾಡಲು ಅವಕಾಶ ನೀಡಲಾಗಿದೆ.


71 ವಿಧಾನಸಭಾ ಕ್ಷೇತ್ರಗಳಲ್ಲಿ 952 ಮಂದಿ ಪುರುಷ ಮತ್ತು 114 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗಯಾ ಕ್ಷೇತ್ರದಲ್ಲಿ ಅತೀ ಹೆಚ್ಚು ಎಂದರೆ, 27 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.


ಇತ್ತೀಚಿನ ಸುದ್ದಿ