ಭಾರತದ ವಿದ್ಯಾರ್ಥಿ ಚೀನಾದಲ್ಲಿ ನಿಗೂಢ ಸಾವು | ಸಾವಿಗೆ ಕಾರಣವೇನು?
ಬೀಜಿಂಗ್: ಭಾರತೀಯ ವಿದ್ಯಾರ್ಥಿಯೋರ್ವ ಚೀನಾದ ಟಿಯಾಂಜಿನ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಘಟನೆ ನಡೆದಿದ್ದು, ಕಳೆದ ತಿಂಗಳ 23ರಂದು ವಿದ್ಯಾರ್ಥಿ ಕೊನೆಯದಾಗಿ ಕುಟುಂಬಸ್ಥರ ಜೊತೆಗೆ ಮಾತನಾಡಿದ್ದು, ಆ ಬಳಿಕ ಕುಟುಂಬಸ್ಥರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎನ್ನಲಾಗಿದೆ.
ಬಿಹಾರದ ಗಯಾ ಮೂಲದ 20 ವರ್ಷ ವಯಸ್ಸಿನ ಅಮನ್ ನಾಗ್ಸನ್ ಚೀನಾದ ಟಿಯಾನ್ಜಿನ್ ವಿದೇಶಿ ಅಧ್ಯಯನ ವಿಶ್ವವಿದ್ಯಾಲಯದಲ್ಲಿ ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ಕ್ಯಾಂಪಸ್ ನ ಕೊಠಡಿಯಲ್ಲಿಯೇ ಆತನ ಮೃತದೇಹ ಪತ್ತೆಯಾಗಿದೆ.
ಕಳೆದ ತಿಂಗಳ 23ರಂದು ತನ್ನ ಕುಟುಂಬಸ್ಥರೊಂದಿಗೆ ಆತ ಕೊನೆಯದಾಗಿ ಮಾತನಾಡಿದ್ದನು. ಆ ಬಳಿಕ ಆತ ಕುಟುಂಬದ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದರ ಜೊತೆಗೆ ಆತನ ವಿದ್ಯಾಭ್ಯಾಸಕ್ಕೆಂದು ಕಳಹಿಸಿದ ಹಣವನ್ನು ಕೂಡ ಆತ ಸ್ವೀಕರಿಸದಿದ್ದಾಗ ಅಮನ್ ಪೋಷಕರು ಆತಂಕಕ್ಕೀಡಾಗಿ ವಿಚಾರಿಸಿದ್ದಾರೆ. ಈ ವೇಳೆ ಅಮನ್ ಜುಲೈ 29ರಂದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಅಮನ್ ನ ಸಾವಿಗೆ ಕಾರಣವೇನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಸದ್ಯ ಆತನ ಮೃತದೇಹವನ್ನು ಭಾರತಕ್ಕೆ ತರಲು ಆತನ ಕುಟುಂಬವು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಇನ್ನಷ್ಟು ಸುದ್ದಿಗಳು…
ಲಾಡ್ಜ್ ನಲ್ಲಿ ಬಾಲಕನ ಅತ್ಯಾಚಾರ | ಮದ್ರಸ ಶಿಕ್ಷಕನಿಗೆ 11 ವರ್ಷ ಜೈಲು
ಬೆಂಗಳೂರು ಪೊಲೀಸ್ ವಶದಲ್ಲಿದ್ದ ಆಫ್ರಿಕಾ ಪ್ರಜೆ ಅನುಮಾನಾಸ್ಪದ ಸಾವು!
ಆಸ್ತಿ ವಿವಾದ ಬಗೆಹರಿಸಲು ಬಂದ ಕೌನ್ಸಿಲರ್, ಎಸ್ ಐಯನ್ನು ಅಟ್ಟಾಡಿಸಿ ಹೊಡೆದ ಮಹಿಳೆ | ವಿಡಿಯೋ ವೈರಲ್
ಅನಾಥ ಹುಡುಗಿಯನ್ನು ಮಗಳಂತೆ ಸಾಕಿ, ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಸಿಕೊಟ್ಟ ಮುಸ್ಲಿಮ್ ಕುಟುಂಬ
ನೀರಿಗೆ ಇಳಿಯಬೇಡಿ ಅಂದ್ರೂ ಇಳಿದರು… | ಸಮುದ್ರದಲ್ಲಿ ಮುಳುಗಿದ ನಾಲ್ವರ ಪೈಕಿ ಓರ್ವಳು ನೀರುಪಾಲು