ಶಿಕ್ಷಕನನ್ನು ಅಪಹರಿಸಿ ಯುವತಿ ಜತೆ ಬಲವಂತದ ಮದುವೆ ಮಾಡಿಸಿದ ತಂಡ: ಬಿಹಾರದಲ್ಲಿ ನಡೆಯಿತು ಸಿನಿಮೀಯ ಘಟನೆ - Mahanayaka
11:49 AM Sunday 22 - December 2024

ಶಿಕ್ಷಕನನ್ನು ಅಪಹರಿಸಿ ಯುವತಿ ಜತೆ ಬಲವಂತದ ಮದುವೆ ಮಾಡಿಸಿದ ತಂಡ: ಬಿಹಾರದಲ್ಲಿ ನಡೆಯಿತು ಸಿನಿಮೀಯ ಘಟನೆ

01/12/2023

ಶಿಕ್ಷಕರೋರ್ವರನ್ನು ಅಪಹರಿಸಿ ಮಗಳ ಜೊತೆಗೆ ಮದುವೆ ಮಾಡಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ. ಗೌತಮ್​​​ ಕುಮಾರ್​​ ಎಂಬ ಶಿಕ್ಷಕ ಇತ್ತೀಚೆಗಷ್ಟೇ ಬಿಹಾರ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆ ಪಾಸ್​​​ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗೌತಮ್‌ ಕುಮಾರ್‌ ಪಟೇಪುರ್‌ನ ರೇಪುರಾದಲ್ಲಿರುವ ಉತ್ಕ್ರಮಿತ್ ಮಧ್ಯ ವಿದ್ಯಾಲಯದಲ್ಲಿ ಹೊಸದಾಗಿ ನೇಮಕಗೊಂಡಿದ್ದರು. ಆದರೆ ಮೂರ್ನಾಲ್ಕು ಮಂದಿ ಶಾಲೆಗೆ ಬಂದು ಬಲವಂತವಾಗಿ ಗೌತಮ್​​ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಅದಾದ ಬಳಿಕ ಬಂದೂಕು ತೋರಿಸಿ ವ್ಯಕ್ತಿಯೊಬ್ಬರ ಮಗಳ ಜತೆಗೆ ಮದುವೆ ಮಾಡಿಸಿದ್ದಾರೆ.

ಇತ್ತ ಈ ಘಟನೆಗೆ ಸಂಬಂಧಿಸಿ ಕುಟುಂಬಸ್ಥರು ಗೌತಮ್‌ ಅಪಹರಣದ ಬಗ್ಗೆ ಪೊಲೀಸರಿಗೆ ದೂರು ನೀಡಿದರು. ತನ್ನ ಮಗನಿಗೆ ಅನ್ಯಾಯ ಮಾಡಿದ್ದಾರೆ ಎಂದು ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ. ಈ ಪ್ರಕರಣಕ್ಕೆ ರಾಜೇಶ್ ರೈ ವ್ಯಕ್ತಿ ಕಾರಣ ಎಂದು ಗೌತಮ್​​​ ಕುಮಾರ್​​ ಮನೆಯವರು ಆರೋಪಿಸಿದ್ದಾರೆ. ತನ್ನ ಮಗನನ್ನು ಬಲವಂತವಾಗಿ ಅಪಹರಿಸಿ, ರಾಜೇಶ್​ ರೈ ತನ್ನ ಮಗಳು ಚಾಂದಿನಿಯೊಂದಿಗೆ ವಿವಾಹ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಈ ಹಿಂದೆಯೇ ನಮ್ಮ ಮನೆಗೆ ಬಂದು ಅವರು ಮದುವೆ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ನಾವು ಒಪ್ಪಿಲ್ಲ. ಈ ವಿಚಾರವನ್ನು ಇಟ್ಟುಕೊಂಡು ನನ್ನ ಮಗನಿಗೆ ದೈಹಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ