ಬೈಕ್-ಇನೋವಾ ಕಾರ್ ನಡುವೆ ಅಪಘಾತ: ಬೈಕ್ ಸವಾರನಿಗೆ ಗಾಯ
ಕಡಬ: ಧರ್ಮಸ್ಥಳ ಸುಬ್ರ್ಮಣ್ಯ ಹೆದ್ದಾರಿ ಇಚಿಲಂಪಾಡಿಯಲ್ಲಿ ಬೈಕ್ ಮತ್ತು ಇನೋವಾ ಕಾರ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರನಿಗೆ ಗಾಯವಾಗಿದೆ.
ಧರ್ಮಸ್ಥಳದಿಂದ ಸುಬ್ರ್ಮಣ್ಯಕ್ಕೆ ಬರುತ್ತಿದ್ದ ಇನೋವಾ ಕಾರ್ ಇಚಿಲಂಪಾಡಿಯಿಂದ ನೆಲ್ಯಾಡಿ ಗೆ ತೆರಳುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ವೇಳೆ ಬೈಕ್ ನಲ್ಲಿ ಇಬ್ಬರು ಸವಾರರಿದ್ದು, ಓರ್ವನ ಕೈಗೆ ಗಂಭೀರವಾಗಿ ಗಾಯವಾಗಿದ್ದು, ಮತ್ತೋರ್ವ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ಇಚಿಲಂಪಾಡ ಗ್ರಾಮದ ಜೀತಿನ್ ಗಾಯಗೊಂಡ ಯುವಕನಾಗಿದ್ದು, ಕೈಗೆ ತೀವ್ರವಾದ ಏಟು ತಗಲಿದೆ. ಯುವಕನನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ವರದಿ: ದೀಪಕ್ ವಿ.ಎಸ್., ನೆಲ್ಯಾಡಿ
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪುನೀತ್ ರಾಜ್‌ಕುಮಾರ್‌ಗೆ ಗೌರವ ಡಾಕ್ಟರೇಟ್ ಪ್ರಧಾನ
ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ: ಐವರು ವಿದ್ಯಾರ್ಥಿಗಳು ಸಾವು
ಭಗವದ್ಗೀತೆ ಪ್ರಚಾರಕ್ಕೆ ಅಡಿಪಾಯ ಹಾಕಿದ್ದೇ ರಾಜೀವ್ ಗಾಂಧಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಮಾತು ಬಾರದ, ಕಿವಿಯೂ ಕೇಳದ ಯುವಕನ ವರಿಸಿದ ಪದವೀಧರ ಯುವತಿ