ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾದ ಅಪರಿಚಿತ ವಾಹನ | ನರ್ಸಿಂಗ್ ವಿದ್ಯಾರ್ಥಿ ಸ್ಥಳದಲ್ಲೇ ಸಾವು
ಮಂಗಳೂರು: ವಾಹನವೊಂದು ವಿದ್ಯಾರ್ಥಿಯ ಬೈಕ್ ಗೆ ಡಿಕ್ಕಿಯಾಗಿ ಪರಾರಿಯಾದ ಘಟನೆ ಮಂಗಳೂರು ನಗರದ ನಂತೂರು ಬಳಿಯಲ್ಲಿ ನಡೆದಿದ್ದು, ಪರಿಣಾಮವಾಗಿ ಮಹಾರಾಷ್ಟ್ರ ಮೂಲದ ವಿದ್ಯಾರ್ಥಿಯೋರ್ವ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಮಹಾರಾಷ್ಟ್ರದ ಪುಣೆಯ 27 ವರ್ಷ ವಯಸ್ಸಿನ ಮಾನಸ್ ಉಗಾಲೆ ಮೃತಪಟ್ಟಿರುವ ವಿದ್ಯಾರ್ಥಿ ಎಂದು ಗುರುತಿಸಲಾಗಿದ್ದು, ವಿದ್ಯಾರ್ಥಿ ತನ್ನ ಪಲ್ಸರ್ ಬೈಕ್ ನಲ್ಲಿ ನಂತೂರ್ ನಿಂದ ಪಂಪ್ ವೆಲ್ ನತ್ತ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಯಾವುದೋ ವಾಹನ ಹಿಂದಿನಿಂದ ಬೈಕ್ ಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ ಎನ್ನಲಾಗಿದೆ.
ಅಪಘಾತವಾಗಿರುವುದನ್ನು ಗಮನಿಸಿದ ಇತರ ವಾಹನದವರು ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ತೆರಳಿದ ಮಂಗಳೂರು ಸಂಚಾರಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡು ಹಿಟ್ ಆ್ಯಂಡ್ ರನ್ ನಡೆಸಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಮೃತ ವಿದ್ಯಾರ್ಥಿಯು ನಗರದ ಖಾಸಗಿ ಕಾಲೇಜೊಂದರಲ್ಲಿ ನರ್ಸಿಂಗ್ ಓದುತ್ತಿದ್ದ ಎಂದು ಹೇಳಲಾಗಿದೆ. ವಿದ್ಯಾರ್ಥಿಗೆ ಅಪರಿಚಿತ ವಾಹನದಿಂದ ಡಿಕ್ಕಿ ಹೊಡೆದು, ಸ್ವಲ್ಪವೂ ಮಾನವೀಯತೆ ಇಲ್ಲದೇ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಸಿಪಿಐನಿಂದ ಕಾಂಗ್ರೆಸ್ ಗೆ ಹೋಗುವಾಗ ಸಿಪಿಐ ಕಚೇರಿಯ ಎಸಿಯನ್ನೂ ಕೊಂಡೊಯ್ದ ಕನ್ಹಯ್ಯಾ!
ಅಪೌಷ್ಟಿಕತೆ ನಿರ್ಮೂಲನೆ ಪೌಷ್ಟಿಕಾಂಶ ಮಾಸಾಚರಣೆ ಅಭಿಯಾನದ ಮುಖ್ಯ ಗುರಿ | ಲಾಲಸಾಬ್ ಪೀರಾಪುರ
ಸ್ವಇಚ್ಛೆಯಿಂದ ಮಾತ್ರ ಮತಾಂತರವಾಗಲು ಕಾನೂನಿನಲ್ಲಿ ಅವಕಾಶವಿದೆ | ಸಿಎಂ ಬಸವರಾಜ ಬೊಮ್ಮಾಯಿ
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ
ಆರೆಸ್ಸೆಸ್ ನದ್ದು ತಾಲಿಬಾನ್ ಸಂಸ್ಕೃತಿ, ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ | ಸಿದ್ದರಾಮಯ್ಯ ವಾಗ್ದಾಳಿ
ಕೃಷಿ ಸಚಿವ ಬಿ.ಸಿ.ಪಾಟೀಲ್, ಸಚಿವೆ ಜೊಲ್ಲೆ ವಿರುದ್ಧ ತಿರುಗಿ ಬಿದ್ದ ಗೋಮಾತೆ | ಸಚಿವರಿಗೆ ತಿವಿಯಲು ಯತ್ನ
ಮಂಗಳೂರು: ಬೇರೆ ಬೇರೆ ಧರ್ಮದ ವಿದ್ಯಾರ್ಥಿಗಳು ಜೊತೆಯಾಗಿ ಪ್ರಯಾಣಿಸುತ್ತಿದ್ದ ಕಾರಿಗೆ ದಾಳಿ: ಐವರು ಕಿಡಿಗೇಡಿಗಳ ಬಂಧನ