ಬೆಳ್ತಂಗಡಿ: ಬೈಕ್‌ ಗೆ ಲಾರಿ ಡಿಕ್ಕಿ; ಇಬ್ಬರ ಸಾವು - Mahanayaka
9:27 PM Wednesday 5 - February 2025

ಬೆಳ್ತಂಗಡಿ: ಬೈಕ್‌ ಗೆ ಲಾರಿ ಡಿಕ್ಕಿ; ಇಬ್ಬರ ಸಾವು

belthangadi
18/01/2022

ಬೆಳ್ತಂಗಡಿ: ಬೈಕ್ ಮತ್ತು ಲಾರಿ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಮದ್ದಡ್ಕದಲ್ಲಿ ಸೋಮವಾರ ರಾತ್ರಿ ವೇಳೆ ಸಂಭವಿಸಿದೆ.

ಮೃತರನ್ನು ನಾವೂರಿನ ನಿವಾಸಿ ಹಮೀದ್ ಕುದುರು ಅವರ ಪುತ್ರ ಮಿಸ್ಬಾಹುದ್ದೀನ್(19) ಎಂದು ತಿಳಿದುಬಂದಿದೆ. ಮತ್ತೋರ್ವ ಯುವಕ ಕುವೆಟ್ಟು ಗ್ರಾಮದ ಗುರುವಾಯನಕೆರೆ ‌ನಿವಾಸಿ ಅಶ್ರಫ್ ಅವರ ಪುತ್ರ ಅಶ್ಫಾನ್(19) ಎಂದು ಗುರುತಿಸಲಾಗಿದೆ.

ಮೃತ ಇಬ್ಬರೂ ಯುವಕರು ಮದ್ದಡ್ಕ ಮಸೀದಿ ಎದುರಿನ ಮಟನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವರು. ಎಂದಿನಂತೆ ಕೆಲಸ ಮುಗಿಸಿ ಮನೆಕಡೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ಗುರುವಾಯನಕೆರೆಯಿಂದ ಮದ್ದಡ್ಕ ಕಡೆಗೆ ತೆರಳುತ್ತಿದ್ದ ಟಿಪ್ಪರ್‌ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಾನವಹಕ್ಕುಗಳ ಉಲ್ಲಂಘನೆ: 12 ಸಾವಿರಕ್ಕೂ ಹೆಚ್ಚು ಮಂದಿಯ ಅಕ್ರಮ ಬಂಧನ; ವಿಶ್ವಸಂಸ್ಥೆ ಕಳವಳ

ವರದಕ್ಷಿಣೆ ಕೊಡದಿದ್ದರೆ ಬೆತ್ತಲೆ ಚಿತ್ರ ವೈರಲ್ ಮಾಡುತ್ತೇನೆಂದ ಪತಿ: ಪತ್ನಿಯಿಂದ ದೂರು

ವೀಕೆಂಡ್‌ ಕರ್ಫ್ಯೂ, ಲಾಕ್‌ ಡೌನ್‌ ಗೆ ನನ್ನ ವಿರೋಧ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ

ರವಿ

ಮೋದಿ ಹೇಳಿದ್ದಕ್ಕೆ ನಾನು ಮಾಸ್ಕ್ ಧರಿಸಿಲ್ಲ: ಉಮೇಶ್ ಕತ್ತಿ

ರಜನಿ ಪುತ್ರಿ ಐಶ್ವರ್ಯಾ ಜೊತೆಗಿನ 18 ವರ್ಷಗಳ ದಾಂಪತ್ಯಕ್ಕೆ ವಿದಾಯ ಹೇಳಿದ ನಟ ಧನುಷ್

 

ಇತ್ತೀಚಿನ ಸುದ್ದಿ