ಬೈಕ್ ನಲ್ಲಿ ಜೊತೆಯಾಗಿ ಪ್ರಯಾಣಿಸಿದ ಅನ್ಯಧರ್ಮೀಯ ಯುವಕ, ಯುವತಿಯ ಮೇಲೆ ದುಷ್ಕರ್ಮಿಗಳಿಂದ ದಾಳಿ - Mahanayaka
9:17 AM Tuesday 24 - December 2024

ಬೈಕ್ ನಲ್ಲಿ ಜೊತೆಯಾಗಿ ಪ್ರಯಾಣಿಸಿದ ಅನ್ಯಧರ್ಮೀಯ ಯುವಕ, ಯುವತಿಯ ಮೇಲೆ ದುಷ್ಕರ್ಮಿಗಳಿಂದ ದಾಳಿ

bangalore
19/09/2021

ಬೆಂಗಳೂರು: ಭಿನ್ನ ಧರ್ಮೀಯ ಯುವಕ, ಯುವತಿ ಬೈಕ್ ನಲ್ಲಿ ಪ್ರಯಾಣಿಸಿದ್ದಕ್ಕೆ ಯುವಕನನ್ನು ಥಳಿಸಿ, ಮಹಿಳೆಗೆ ಬೆದರಿಕೆ ಹಾಕಿದ ಇಬ್ಬರು ದುಷ್ಕರ್ಮಿಗಳನ್ನು ಎಸ್.ಜಿ.ಪಾಳ್ಯ ಪೊಲೀಸರು ಬಂಧಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು  ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ನಗರದ ಡೈರಿ ಸರ್ಕಲ್ ಬಳಿಯಲ್ಲಿ ಬ್ಯಾಂಕ್ ವೊಂದರ ನೌಕರರಾದ ಮಹೇಶ್ ಎಂಬವರು ತಮ್ಮ ಸಹೋದ್ಯೋಗಿ ಮುಸ್ಲಿಮ್ ಮಹಿಳೆಯನ್ನು ಬೈಕ್ ನಲ್ಲಿ ಅವರ ಮನೆಗೆ ಡ್ರಾಪ್ ಮಾಡುತ್ತಿದ್ದರು. ಈ ವೇಳೆ ಇವರನ್ನು ಹಿಂಬಾಲಿಸಿ ಬಂದಿದ್ದ ದುಷ್ಕರ್ಮಿಗಳು ಮಹೇಶ್ ಗೆ ಹಲ್ಲೆ ನಡೆಸಿದ್ದು, ಇನ್ನೊಂದು ಬಾರಿ ಮಹಿಳೆಯನ್ನು  ಕೂರಿಸಿಕೊಂಡು ಹೋದರೆ ಅಷ್ಟೇ ಎಂದು ಬೆದರಿಕೆ ಹಾಕಿದ್ದಾರೆ.

ಇದೇ ವೇಳೆ ಮಹಿಳೆಗೆ ಅವಾಜ್ ಹಾಕಿದ್ದ ಪುಂಡರು, ನಿನಗೆ ನಾಚಿಕೆಯಾಗಲ್ವಾ? ಈ ಜಗತ್ತಲ್ಲಿ ಏನಾಗ್ತಿದೆ ಅಂತ ಗೊತ್ತಿಲ್ವಾ? ಅನ್ಯಕೋಮಿನವರೊಂದಿಗೆ ಹೋಗೆ ಕುಳಿತು ಹೋಗುತ್ತೀಯಾ ಎಂದು ಗದರಿಸಿ ಬೈಕ್ ನಿಂದ ಇಳಿಸಿ ಆಟೋದಲ್ಲಿ ಹೋಗು ಎಂದು ಬೆದರಿಕೆ ಹಾಕಿದ್ದಾರೆ. ಈ ವೇಳೆ ಮಹಿಳೆ, ಏನ್ ಅಣ್ಣ ನಿನ್ ಸಮಸ್ಯೆ? ಇದೇ ದಾರಿಯಲ್ಲಿ ಮನೆಗೆ ಹೊರಟಿದ್ದೆ, ನನಗೆ ಮದುವೆ ಆಗಿದೆ ಎಂದು ಹೇಳಿದ್ದಾರೆ. ಈ ವೇಳೆ ನಿನ್ನ ಗಂಡನ ನಂಬರ್ ಕೊಡು ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ.

ಅನಾಗರಿಕ ಧಾರ್ಮಿಕ ಮಾನಸಿಕತೆ!

ಸಮಾಜದಲ್ಲಿ ಅನ್ಯಕೋಮಿಮನ ಯುವಕ, ಯುವತಿ ಎಂಬ ಹೆಸರಿನಲ್ಲಿ ದಾಳಿಗಳು ಹೆಚ್ಚಾಗಿವೆ. ಹಿಂದೂ ಧರ್ಮದ ಹೆಸರಿನಲ್ಲಿ ಆಗಾಗ ನಡೆಯುತ್ತಿದ್ದ ಇಂತಹ ದಾಳಿಗಳು ಮುಸ್ಲಿಮ್ ಧರ್ಮದ ಹೆಸರಿನಲ್ಲಿಯೂ ಈಗ ಆರಂಭವಾಗಿದೆ. ಪೊಲೀಸರು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಂತಹ ಘಟನೆಗಳಾದಾಗ ಪೊಲೀಸರು ಧರ್ಮಗಳನ್ನು ನೋಡದೇ ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳಬೇಕು.

ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಗೃಹ ಇಲಾಖೆಗೆ ಕೂಡ ಅಗೌರವ ತರುವಂತಹದ್ದು, ಬೀದಿಯಲ್ಲಿ ತಿರುಗುವ ಅಬ್ಬೇಪಾರಿಗಳ ಕಾನೂನು ರಾಜ್ಯದಲ್ಲಿ ಪಾಲನೆಯಾಗುವುದಿದ್ದರೆ, ಗೃಹ ಇಲಾಖೆ, ಕಾನೂನಿಗೆ ಏನು ಬೆಲೆ ಇದೆ? ತಮ್ಮ ಸಹೋದ್ಯೋಗಿಗಳ ಜೊತೆಗೆ, ಸಹಪಾಠಿಗಳ ಜೊತೆಗೆ, ನೆರೆಹೊರೆಯ ಅನ್ಯ ಧರ್ಮೀಯರೊಡನೇ ಮಾತನಾಡಲು, ಪ್ರಯಾಣಿಸಲು ಧಾರ್ಮಿಕ ಸಂಘಟನೆಗಳ, ಊರಿನಲ್ಲಿ ಕೆಲಸ ಇಲ್ಲದೇ ಸುತ್ತಾಡುವ ಪೋಲಿ, ರೌಡಿಗಳ ಆದೇಶಕ್ಕೆ ಜನರು ಕಾಯಬೇಕೇ? ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಗೃಹ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಆಕ್ರೋಶ ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ಇನ್ನಷ್ಟು ಸುದ್ದಿಗಳು…

‘ಕಾರ್ಯಕ್ರಮ ಮುಗಿಯಿತು’: ಮೋದಿ ಜನ್ಮದಿನಾಚರಣೆ ಕೊವಿಡ್ ಲಸಿಕೆ ಬಗ್ಗೆ ರಾಹುಲ್ ಕಿಡಿ

ಸ್ವಯಂಕೃತ ಅಪರಾಧಗಳಿಂದ ಕಾಂಗ್ರೆಸ್ ವಿನಾಶದ ಅಂತಿಮ ಕಾಲಘಟ್ಟದಲ್ಲಿದೆ | ಅರುಣ್ ಸಿಂಗ್

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮುಖ್ಯೋಪಾಧ್ಯಾಯನಿಗೆ ಪೊಲೀಸರ ಎದುರೇ ಹಿಗ್ಗಾಮುಗ್ಗಾ ಥಳಿಸಿದ ಜನರು!

ಅಮಾನವೀಯ ಘಟನೆ: ಮಕ್ಕಳ ಹೆಸರಿಗೆ ಆಸ್ತಿ ಬರೆದ ಬಳಿಕ ತಂದೆಯನ್ನು ಕೋಣೆಯೊಳಗೆ ಬಂಧಿಸಿಟ್ಟ ಮಕ್ಕಳು!

ಬೋರ್ ವೇಲ್ ಗೆ ಬಿದ್ದು ಮಗು ಸಾವು ಪ್ರಕರಣಕ್ಕೆ ತಿರುವು: ತಂದೆಯಿಂದಲೇ ನಡೆದಿತ್ತು ಹೀನ ಕೃತ್ಯ

ಮಗಳನ್ನು ಚುಡಾಯಿಸಬೇಡ ಎಂದಿದ್ದಕ್ಕೆ ಬಾಲಕಿಯ ತಂದೆಗೆ ಮಾರಣಾಂತಿಕ ಹಲ್ಲೆ!

ಇತ್ತೀಚಿನ ಸುದ್ದಿ