ಬೈಕ್ ಸವಾರನ ಮೇಲೆ ದಾಳಿ ನಡೆಸಿದ ಕಾಡುಕೋಣಗಳ ಹಿಂಡು: ಇಲ್ಲಿ ಹಗಲು ಹೊತ್ತಲ್ಲೇ ತಿರುಗಾಡ್ತಿದೆ ಕಾಡುಕೋಣಗಳು!
ಬೆಳ್ತಂಗಡಿ: ವ್ಯಕ್ತಿಯೊಬ್ಬರ ಮೇಲೆ ಕಾಡು ಕೋಣಗಳ ಹಿಂಡೊಂದು ದಾಳಿ ನಡೆಸಿದ ಘಟನೆ ಬೆಳಾಲು ಗ್ರಾಮದ ಪೆರಿಯಡ್ಕ ಎಂಬಲ್ಲಿ ನಡೆದಿದೆ.
ಉಜಿರೆಯಿಂದ ಕೆಲಸ ಮುಗಿಸಿಕೊಂಡು ಸಂಜೆ 7 ಗಂಟೆ ಸುಮಾರಿಗೆ ಲೋಕೇಶ್ ಎಂಬವರು ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿರುವಾಗ ಪೆರಿಯಡ್ಕ ಎಂಬಲ್ಲಿ ಕಾಡು ಕೋಣವೊಂದು ಅಡ್ಡ ಬಂದಿದ್ದು, ತಕ್ಷಣ ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿದಾಗ ಸುಮಾರು 10 ಸಂಖ್ಯೆಯಲ್ಲಿದ್ದ ಕಾಡು ಕೋಣಗಳ ಹಿಂಡು ಇವರ ವಾಹನದ ಹಿಂದೆ ಬರುತಿತ್ತು. ಇದನ್ನು ಗಮನಿಸಿದ ಅವರು ಮುಂದೆ ಹೋಗಲು ಪ್ರಯತ್ನಿಸಿದಾಗ ಕಾಡುಕೋಣವೊಂದು ಇವರಿಗೆ ದಾಳಿ ನಡೆಸಿದೆ. ವಾಹನ ಸಹಿತ ಅವರು ಸ್ವಲ್ಪ ದೂರ ಎಸೆಯಲ್ಪಟ್ಟು ಬಿದ್ದಿದ್ದಾರೆ. ನಂತರ ಮತ್ತೊಂದು ಕಾಡು ಕೋಣವೂ ದಾಳಿಗೆ ಮುಂದಾದಾಗ ಅದೃಷ್ಟವಶಾತ್ ತಪ್ಪಿಸಿಕೊಂಡರೆನ್ನಲಾಗಿದೆ.
ಕಾಡು ಕೋಣ ದಾಳಿಯಿಂದ ಕಾಲು ಹಾಗೂ ಬೆನ್ನಿಗೆ ಗಾಯಗಳಾಗಿದ್ದು ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಹೆಲ್ಮೆಟ್ ಇದುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ ಕೆಲವು ವರುಷಗಳಿಂದ ಈ ಭಾಗದಲ್ಲಿ ಕಾಡು ಕೋಣಗಳ ಹಾವಳಿಯಿಂದಾಗಿ ಕೃಷಿ ಹಾಳಾಗುತಿದ್ದು ಸಂಬಂಧಪಟ್ಟ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಪಟಾಕಿ ಅಥವಾ ಶಬ್ದ ಮಾಡಿ ಓಡಿಸುವಂತೆ ಉಡಾಫೆ ಉತ್ತರ ನೀಡಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಹಗಲು ಹೊತ್ತಿನಲ್ಲೂ ಆತ್ತಿತ್ತ ಓಡಾಡುವ ಕಾಡು ಕೋಣಗಳಿಂದಾಗಿ ಸ್ಥಳೀಯ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲೂ ಪೋಷಕರು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ ಕಾಡುಕೋಣಗಳನ್ನು ಓಡಿಸಲು ಕ್ರಮ ಕೈಗೊಳಳುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka