ಪಠ್ಯ ಪುಸ್ತಕದಿಂದ ನಾರಾಯಣ ಗುರು ಹೊರಗೆ: “ಬಿಲ್ಲವ ಸಚಿವರು ರಾಜೀನಾಮೆ ನೀಡಲಿ”
ಮಂಗಳೂರು: 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಾಯವನ್ನು ಕೈಬಿಟ್ಟಿರುವುದರಿಂದ ಸಮುದಾಯದ ಇಬ್ಬರು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ರಮಾನಾಥ ರೈ ಒತ್ತಾಯಿಸಿದ್ದಾರೆ.
ಈ ಬಗ್ಗೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವಕುಲಕ್ಕೆ ಮಾರ್ಗದರ್ಶಕರಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಾಯವನ್ನು 10ನೇ ತರಗತಿಯಿಂದ ಕೈಬಿಟ್ಟಿರುವುದು ಇತರೆ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ನೋವುಂಟು ಮಾಡುವುದಲ್ಲದೆ, ಸಮಾಜಕ್ಕೂ ನೋವುಂಟು ಮಾಡಿದೆ. ಇದು ಬಿಜೆಪಿ ವಿರುದ್ದ ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಆರೋಪ ಅಲ್ಲ. ಈ ವಿಚಾರವನ್ನು ಮಾಧ್ಯಮಗಳು ಮತ್ತು ಚಿಂತಕರು ಬಹಿರಂಗಪಡಿಸಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ ಎಂದರು.
ಜಿಲ್ಲೆಯಲ್ಲಿ ನಾರಾಯಣ ಗುರುಗಳ ಅಪಾರ ಅನುಯಾಯಿಗಳಿದ್ದಾರೆ. ಅವರ ಮತಗಳನ್ನು ಪಡೆದು ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈಗ ಅವರನ್ನು ನೆನಪಿಸಿಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಇಂತಹ ದಾರ್ಶನಿಕರ ಅಧ್ಯಾಯವನ್ನು ಕೈಬಿಡುವ ಮೂಲಕ ಸರಕಾರ ನಿರ್ಲಕ್ಷ್ಯದ ಧೋರಣೆ ತಾಳಿದೆ. ಹೀಗಾಗಿ ಅವಿಭಜಿತ ಜಿಲ್ಲೆಯ ಇಬ್ಬರು ಸಮುದಾಯದ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಹುಡುಗಿ ನೋಡಿ ಬರುತ್ತೇನೆ ಎಂದು ಹೊರಟಿದ್ದ ಯುವಕ ನೀರುಪಾಲು!
ತೂಕ ಇಳಿಸಲು ಸಹಕಾರಿಯಾಗಿರುವ 3 ಬಗೆಯ ಚಹಾಗಳು!
ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ವೇಳೆ ಅಪಘಾತ: ಇಬ್ಬರು ಸಾವು, ಓರ್ವ ಗಂಭೀರ
ಪ್ರೇಯಸಿಯನ್ನು ಗೋವಾ ಬೀಚ್ ಗೆ ಕರೆದೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಯುವಕ!