12:53 AM Wednesday 12 - March 2025

ಪಕ್ಷಿ ಜ್ವರ: ಈ ಜಿಲ್ಲೆಯಲ್ಲಿ ಹೈಅಲಾರ್ಟ್

05/01/2021

ಮೈಸೂರು:  ಮಹಾರಾಷ್ಟ್ರ ಹಾಗೂ ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ಕಂಡು ಬಂದಿದ್ದು, ಇದೇ ಸಂದರ್ಭದಲ್ಲಿ  ಮೈಸೂರಿನಲ್ಲಿ ಹೈ ಅಲಾರ್ಟ್ ಘೋಷಿಸಲಾಗಿದೆ.

ಪಕ್ಷಿ ಜ್ವರದ ಹಿನ್ನೆಲೆಯಲ್ಲಿ ರಂಗನತಿಟ್ಟು ಮೃಗಾಲಯ ಹಾಗೂ ಕೆರೆಗಳಲ್ಲಿ ಮುಂಜಾಗೃತೆ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಮೈಸೂರು ಡಿಸಿಎಫ್ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

ಇನ್ನೂ ರಂಗನತಿಟ್ಟುಗೆ ಸಾರ್ವಜನಿಕ ಪ್ರವೇಶ ನಿರ್ಬಂಧ ಹೇರಬೇಕೇ? ಬೇಡವೇ? ಎಂಬ ಬಗ್ಗೆ  ಉನ್ನತ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಾಗುವುದು ಎಂದು ಪ್ರಶಾಂತ್ ತಿಳಿಸಿದ್ದಾರೆ.  ಮೈಸೂರಿನಲ್ಲಿ ಈ ಹಿಂದೆಯೂ 2 ಹಕ್ಕಿಗಳು ಮೃತಪಟ್ಟಿದ್ದವು.  ಅವುಗಳನ್ನು ಲ್ಯಾಬ್ ಗೆ ಕಳುಹಿಸಿದ ಸಂದರ್ಭದಲ್ಲಿ ನೆಗೆಟಿವ್ ರಿಪೋರ್ಟ್ ಬಂದಿತ್ತು.

ಇತ್ತೀಚಿನ ಸುದ್ದಿ

Exit mobile version