ಬಿರಿಯಾನಿ ತಿಂದ ಕೆಲವೇ ಹೊತ್ತಿನಲ್ಲಿ ಬಾಲಕಿ ಸಾವು: 15 ದಿನಗಳ ಹಳೆಯ ಕೋಳಿ ಮಾಂಸದಲ್ಲಿ ಬಿರಿಯಾನಿ ತಯಾರಿಕೆ!
ಚೆನ್ನೈ: ಆಹಾರ ವೆಜ್ ಆಗಿರಲಿ, ನಾನ್ ವೆಜ್ ಆಗಿರಲಿ, ಅದನ್ನು ಮನೆಯಲ್ಲಿಯೇ ತಯಾರಿಸಿ ತಿನ್ನುವುದು ಆರೋಗ್ಯಕ್ಕೆ ಉತ್ತಮ. ಚೆನ್ನೈನಲ್ಲಿ ನಡೆದಿರುವ ಘಟನೆಯೊಂದು ಇದೀಗ ಹೊಟೇಲ್ ಗಳಲ್ಲಿ ಆಹಾರ ಸೇವಿಸಲೂ ಭಯಪಡುವಂತಹ ಸನ್ನಿವೇಶವನ್ನು ಸೃಷ್ಟಿಸಿದೆ.
ಹೌದು…! ತಮಿಳುನಾಡಿನ ತಿರುವಣ್ಣಾ ಮಲೈನ ಹೊಟೇಲೊಂದರಲ್ಲಿ ಬಿರಿಯಾನಿ ಸೇವಿಸಿದ 10 ವರ್ಷದ ಬಾಲಕಿಯೋರ್ವಳು ಅಸ್ವಸ್ಥಗೊಂಡು ಸಾವನ್ನಪ್ಪಿದ್ದು, ಸುಮಾರು 21 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿರಿಯಾನಿ ತಿಂದು ಕೆಲವೇ ಹೊತ್ತಿನಲ್ಲಿ ಬಾಲಕಿ ಅಸ್ವಸ್ಥಗೊಂಡಿದ್ದು, ಆಕೆ ಸಾವನ್ನಪ್ಪಿದ್ದಾಳೆ. ಈ ಇದೇ ಹೊಟೇಲ್ ನಲ್ಲಿ ಆಹಾರ ಸೇವನೆ ಮಾಡಿದ 21ಕ್ಕೂ ಅಧಿಕ ಜನರು ಅಸ್ವಸ್ಥರಾದ ಮಾಹಿತಿ ಪಡೆದ ತಕ್ಷಣವೇ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಹೊಟೇಲ್ ಗೆ ದಾಳಿ ನಡೆಸಿದ್ದಾರೆ.
ಈ ವೇಳೆ ಸುಮಾರು 15 ದಿನಗಳಿಂದ ಸಂಗ್ರಹಿಸಿಡಲಾಗಿದ್ದ ಕೋಳಿ ಮಾಂಸ ಪತ್ತೆಯಾಗಿದ್ದು, ಈ ಮಾಂಸವನ್ನು ನಾಶಗೊಳಿಸಿ, ಹೊಟೇಲ್ ಸೀಲ್ ಮಾಡಿದ್ದಾರೆ. ಹೊಟೇಲ್ ಮಾಲಿಕ ಹಾಗೂ ಅಡುಗೆಯವನನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನಷ್ಟು ಸುದ್ದಿಗಳು…
ಮುಂಬೈ: ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ!
ಕೇವಲ ಐದು ರೂಪಾಯಿಗಾಗಿ ಬುಡಕಟ್ಟು ಸಮುದಾಯದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!
ಮಮತಾ ಬ್ಯಾನರ್ಜಿಯ ಸಾಧನೆಯನ್ನು ತನ್ನ ಸಾಧನೆ ಎಂದು ಜಾಹೀರಾತು ನೀಡಿದ ಯೋಗಿ ಆದಿತ್ಯನಾಥ್
ಗಣೇಶೋತ್ಸವದ ಸಂಭ್ರಮದಲ್ಲಿ ಡಾನ್ಸ್ ಮಾಡುತ್ತಲೇ ಪ್ರಾಣ ಬಿಟ್ಟ ಯುವಕ!
ಗುಜರಾತ್ ನ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಹೆಸರು ಅಧಿಕೃತ ಘೋಷಣೆ
ಕಾಂಗ್ರೆಸ್ ಮುಂದಿನ ಎರಡು ದಶಕಗಳ ಕಾಲ ಅಧಿಕಾರಕ್ಕೆ ಬರುವ ಕನಸು ಕಾಣುವ ಅಗತ್ಯವಿಲ್ಲ | ನಳಿನ್ ಕುಮಾರ್ ಕಟೀಲ್
ಜೈಲಿನಲ್ಲಿ ಮಹಿಳಾ ಪೊಲೀಸ್ ಮುಂದೆ ಬಟ್ಟೆ ಬಿಚ್ಚಿ ನಿಂತು ಕೈದಿಯಿಂದ ಅನುಚಿತ ವರ್ತನೆ!