ತಮ್ಮ ಹುಟ್ಟುಹಬ್ಬದ ದಿನ ಸನ್ನಿ ಲಿಯೋನ್ ಎಂತಹ ಕೆಲಸ ಮಾಡಿದ್ದಾರೆ  ಗೊತ್ತಾ?

sunnyleone
13/05/2021

ಬಾಲಿವುಡ್ ನಟಿ ಸನ್ನಿ ಲಿಯೋನ್ ಇಂದು ತಮ್ಮ 40ನೇ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದು, ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಆಹಾರ ಒದಗಿಸುವ ಕಾರ್ಯಕ್ಕೆ ಅವರು ಮುಂದಾಗಿದ್ದಾರೆ.

“ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ ಮೆಂಟ್ ಆಫ್ ಅನಿಮಲ್” ಸಂಸ್ಥೆಯ ಜೊತೆಗೂಡಿ ವಲಸೆ ಕಾರ್ಮಿಕರಿಗೆ ಆಹಾರ ಒದಗಿಸುವ ಕೆಲಸಕ್ಕೆ ಸನ್ನಿ ಲಿಯೋನ್ ಕೈ ಹಾಕಿದ್ದು,  ಈ ಮೂಲಕ ತಮ್ಮ ಹುಟ್ಟು ಹಬ್ಬಕ್ಕೆ ಅರ್ಥ ನೀಡಿದ್ದಾರೆ.

ನಾವು ಕೊರೊನಾ ಕಾಲದಲ್ಲಿದ್ದೇವೆ. ಇನ್ನೊಬ್ಬರ ಮೇಲೆ ಕರುಣೆ ತೋರುವುದು ಮತ್ತು ಒಗ್ಗಟ್ಟು ಸಾಧಿಸುವ ಮೂಲಕ ಕೊರೊನಾವನ್ನು ನಾವು ದೂರ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಾನು ವಲಸೆ ಕಾರ್ಮಿಕರಿಗೆ ಕಿಚಡಿ ಮತ್ತು ಹಣ್ಣಗಳನ್ನು ನೀಡುವ ಕಾರ್ಯ ಮಾಡುತ್ತಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಳ್ಳಿ, ಸುರಕ್ಷಿತವಾಗಿರಿ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಪರಸ್ಪರ ಸಹಾಯ ಮಾಡೋಣ. ಪ್ಲಾಸ್ಮಾ ದಾನದ ಮೂಲಕ ಪ್ರಾಣಗಳನ್ನು ಉಳಿಸೋಣ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version