ಬಿಜೆಪಿ ನಾಯಕನ ಮಗನ ಬರ್ಥ್ ಡೇ ಪಾರ್ಟಿಯಲ್ಲಿ ಗಾಯಕನಿಗೆ ಗುಂಡು | ಗಾಯಕನ ಸ್ಥಿತಿ ಗಂಭೀರ - Mahanayaka
9:16 AM Tuesday 24 - December 2024

ಬಿಜೆಪಿ ನಾಯಕನ ಮಗನ ಬರ್ಥ್ ಡೇ ಪಾರ್ಟಿಯಲ್ಲಿ ಗಾಯಕನಿಗೆ ಗುಂಡು | ಗಾಯಕನ ಸ್ಥಿತಿ ಗಂಭೀರ

28/10/2020

ಮಹಾಕರ್ಪೂರ್: ಉತ್ತರಪ್ರದೇಶದ ಬಿಜೆಪಿ ನಾಯಕನ ಮನೆಯಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಭೋಜ್ ಪುರಿ ಗಾಯಕ ಹಾಗೂ ನಟ ಗೋಲು ರಾಜ ಅವರಿಗೆ ಆಕಸ್ಮಿಕವಾಗಿ ಗುಂಡು ತಾಗಿರುವ ಘಟನೆ ನಡೆದಿದೆ.


ಬಿಜೆಪಿ ಸ್ಥಳೀಯ ನಾಯಕ ಭಾನು ದುಬೆ ಮನೆಯಲ್ಲಿ ಆತನ ಪುತ್ರನ ಹುಟ್ಟು ಹಬ್ಬದ ಪಾರ್ಟು ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಗೋಲುರಾಜ ಕೂಡ ಭಾಗಿಯಾಗಿದ್ದರು.  ಉತ್ತರಪ್ರದೇಶದಲ್ಲಿ ಯಾವುದೇ ಸಂತಸದ ಸಂದರ್ಭದಲ್ಲಿ ಗುಂಡು ಹಾರಿಸುವ, ಕೆಟ್ಟ ಸಂಪ್ರದಾಯವಿದೆ. ಹೀಗೆ ಹಾರಿಸಲಾಗಿದ್ದ ಗುಂಡು ಗೋಲು ರಾಜರಿಗೆ ತಾಗಿದೆ.


ಗುಂಡು ತಗಲಿದ ಸಂದರ್ಭದಲ್ಲಿ ತಕ್ಷಣವೇ ಅವರನ್ನು ಬುಕ್ಪಾರ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ವಾರಣಾಸಿಗೆ ಶಿಫ್ಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಇತ್ತೀಚಿನ ಸುದ್ದಿ