‍104 ವರ್ಷಗಳ ದೀರ್ಘ ಬದುಕಿಗೆ  ವಿದಾಯ ಹೇಳಿದ ಬಿಷಪ್ ಪಿಲಿಪೋಸ್‌ ಮಾರ್‌ ಕ್ರಿಸೊಸ್ಟೊಮ್‌ - Mahanayaka

‍104 ವರ್ಷಗಳ ದೀರ್ಘ ಬದುಕಿಗೆ  ವಿದಾಯ ಹೇಳಿದ ಬಿಷಪ್ ಪಿಲಿಪೋಸ್‌ ಮಾರ್‌ ಕ್ರಿಸೊಸ್ಟೊಮ್‌

philipos mar chrysostom
05/05/2021

ತಿರುವಳ್ಳ: ಮಲಂಕರ ಮಾರ್ ಥೋಮಾ ಸಿರಿಯನ್ ಚರ್ಚ್‌ನ ಮಾಜಿ ಮುಖ್ಯಸ್ಥ ಡಾ.‍ಪಿಲಿಪೋಸ್‌ ಮಾರ್‌ ಕ್ರಿಸೊಸ್ಟೊಮ್‌ ಅವರು(104) ವಯೊಸಹಜ ಕಾಯಿಲೆಯಿಂದಾಗಿ ಬುಧವಾರ ನಿಧನರಾದರು.


Provided by

‘ಭಾರತದಲ್ಲಿ ದೀರ್ಘಕಾಲದವರೆಗೆ ಬಿಷಪ್‌ ಆಗಿ ಸೇವೆ ಸಲ್ಲಿಸಿದ ಡಾ.ಪಿಲಿಪೋಸ್‌ ಅವರು ಬೆಳಿಗ್ಗೆ 1.15ರ ಸುಮಾರಿಗೆ ಕುಂಬನಾಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು’ ಎಂದು ಚರ್ಚ್‌ನ ವಕ್ತಾರರು ತಿಳಿಸಿದರು.

2018ರಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಡಾ.ಪಿಲಿಪೋಸ್‌ ಅವರಿಗೆ ಪದ್ಮಭೂಷಣ ನೀಡಿ ಗೌರವಿಸಿದರು. ಬಡವರು ಮತ್ತು ಸಾಮಾಜಿಕವಾಗಿ ತುಳಿತಕ್ಕೆ ಒಳಗಾದವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಪಿಲಿಪೋಸ್‌ ಅವರು ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು.


Provided by

ಮೊದಲಿನಿಂದಲೇ ಮಿಷನರಿ ಕೆಲಸಗಳತ್ತ ಆಕರ್ಷಿತರಾಗಿದ್ದ ಅವರು 1944ರಲ್ಲಿ ಚರ್ಚ್‌ನ ಧರ್ಮಾಧಿಕಾರಿಯಾಗಿ ನೇಮಕಗೊಂಡರು. ಬಳಿಕ 1953ರಲ್ಲಿ ಚರ್ಚ್‌ನ ಬಿಷಪ್‌ ಆದರು. ಅವರು ಒಟ್ಟು 66 ವರ್ಷಗಳ ಕಾ‍ಲ ಬಿಷಪ್‌ ಆಗಿ ಸೇವೆ ಸಲ್ಲಿಸಿದ್ದಾರೆ.

ಇತ್ತೀಚಿನ ಸುದ್ದಿ