ಶಾಕಿಂಗ್ ನ್ಯೂಸ್: ಬಿಸಿಲಿನ ತಾಪಕ್ಕೆ ಸುಟ್ಟು ಹೋದ ಯುವಕನ ಬೆನ್ನು!
ಕೊಚ್ಚಿ: ದೇಶಾದ್ಯಂತ ಜನರು ಬಿಸಿಲಿನ ತಾಪಕ್ಕೆ ತತ್ತರಿಸಿ ಹೋಗಿದ್ದಾರೆ. ಈ ಪೈಕಿ ಕೂಲಿ ಕಾರ್ಮಿಕರ ಪಾಡು ಹೇಳತೀರದು. ಕೇರಳದಲ್ಲಿ ಬಿಸಿಲಿನ ತಾಪಕ್ಕೆ ಕಾರ್ಮಿಕನೊಬ್ಬನ ಬೆನ್ನು ಸುಟ್ಟು ಹೋದ ಆಘಾತಕಾರಿ ಘಟನೆ ವರದಿಯಾಗಿದೆ.
ಎರ್ನಾಕುಲಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಪಲ್ಲಂತುರುತ್ ಎಂಬಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಯುವಕನ ಬೆನ್ನಿನ ಹೊರ ಚರ್ಮ ಬಿಸಿಲಿನ ತಾಪಕ್ಕೆ ಸುಟ್ಟು ಹೋಗಿದೆ. ಮಧ್ಯಾಹ್ನ 12 ಗಂಟೆಯವರೆಗೆ ಕೆಲಸ ಮಾಡಿದ್ದ ಯುವಕನ ಬೆನ್ನಿನ ಚರ್ಮದ ಬಿಸಿಲಿನ ತಾಪಕ್ಕೆ ಸುಟ್ಟು ಹೋಗಿದೆ.
ಕೇರಳದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿದೆ. ಹೀಗಾಗಿ ಮಧ್ಯಾಹ್ನದ ವೇಳೆ ಹೊಲದಲ್ಲಿ ಕೆಲಸ ಮಾಡುವವರು ಮುಂಜಾಗ್ರತೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಇನ್ನೊಂದೆಡೆ ಉತ್ತರ ಭಾರತದಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆಗಳು ಕಂಡು ಬಂದಿದ್ದು, ಕೇರಳ ರಾಜ್ಯಕ್ಕೂ ಇದೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.’
ಒಂದೆಡೆ ತೀವ್ರ ಬಿಸಿಲು ಇನ್ನೊಂದೆಡೆ ಅಕಾಲಿಕ ಮಳೆ, ಮಿಂಚು, ಇನ್ನೊಂದೆಡೆ ಬೀಸುತ್ತಿರುವ ಬಿಸಿ ಗಾಳಿಯಿಂದ ದೇಶಾದ್ಯಂತ ಜನರು ತತ್ತರಿಸಿದ್ದಾರೆ. ಈ ನಡುವೆ ಕಾರ್ಮಿಕರ ಸ್ಥಿತಿ ಹೇಳತೀರದು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಭಾರತ ಹಿಂದಿ ಭಾಷಿಗರದ್ದು, ಹಿಂದಿಯನ್ನು ಪ್ರೀತಿಸದವರು ಭಾರತ ಬಿಟ್ಟು ಹೋಗಿ: ಉತ್ತರ ಪ್ರದೇಶ ಸಚಿವ
ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ನಾಲ್ವರ ದಾರುಣ ಸಾವು
ಮದುವೆ ಮಂಟಪಕ್ಕೆ ನುಗ್ಗಿ ವಧುವನ್ನು ಗುಂಡಿಕ್ಕಿ ಕೊಂದ ಪ್ರಿಯಕರ!
“ನೀನು ನೋಡಲು ಚೆನ್ನಾಗಿಲ್ಲ” ಎಂದು ನಿಂದಿಸಿ, ಟಾಯ್ಲೆಟ್ ಕ್ಲೀನರ್ ಕುಡಿಸಿ ಗರ್ಭಿಣಿ ಪತ್ನಿಯ ಹತ್ಯೆ
ಕೋಳಿಯನ್ನು ಜೀವಂತವಾಗಿ ಅಂಗಾಂಗ ಕಿತ್ತು ಕೊಂದ ಕೋಳಿ ಅಂಗಡಿ ಮಾಲಿಕ ಅರೆಸ್ಟ್!