ಬಿಟ್ ಕಾಯಿನ್  ಪ್ರಮುಖ ಆರೋಪಿ  ಶ್ರೀಕಿಯ ಎನ್ ಕೌಂಟರ್ ಸಾಧ್ಯತೆ? - Mahanayaka

ಬಿಟ್ ಕಾಯಿನ್  ಪ್ರಮುಖ ಆರೋಪಿ  ಶ್ರೀಕಿಯ ಎನ್ ಕೌಂಟರ್ ಸಾಧ್ಯತೆ?

bitcoin
16/11/2021

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ಈ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಶ್ರೀಕೃಷ್ಣ ಯಾನೆ ಶ್ರೀಕಿಯನ್ನು ಎನ್ ಕೌಂಟರ್ ಮಾಡುವ ಸಾಧ್ಯತೆ ಇದೆ ಎಂಬ ಗಂಭೀರ ಆರೋಪವನ್ನು ಕಾಂಗ್ರೆಸ್ ಮಾಡಿದೆ.

ಉತ್ತರ ಪ್ರದೇಶದ ಅಪರಾಧಗಳಲ್ಲಿ  ತನ್ನ ಪಾತ್ರ ತಿಳಿಯಬಾರದು ಎಂದು ಅಲ್ಲಿನ ಸರ್ಕಾರ ವಿಕಾಸ್ ದುಬೆಯನ್ನು ಹತ್ಯೆ ಮಾಡಿದಂತೆ ಕರ್ನಾಟಕದಲ್ಲಿಯೂ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಶ್ರೀಕಿಯನ್ನು  ಪೊಲೀಸರು ಎನ್ ಕೌಂಟರ್ ಮಾಡುವ ಸಾಧ್ಯತೆ ಇದೆ ಎಂಬ ಅನುಮಾನವಿದೆ ಎಂದು ಕೆಪಿಸಿಸಿ ವಕ್ತಾರ ಮತ್ತು ಸುಪ್ರೀಂ ಕೋರ್ಟ್ ವಕೀಲ ಸಂಕೇತ್ ಏಣಗಿ ಗಂಭೀರವಾಗಿ ಆರೋಪ ಮಾಡಿದ್ದಾರೆ.

ಬಿಟ್ ಕಾಯಿನ್ ಪ್ರಕರಣ ತಂತ್ರಜ್ಞಾನ ಅವಲಂಬಿಸಿರುವ ಬೈಟ್ ಕಾಲರ್ ಅಪರಾಧ, ಇದಕ್ಕೆ ಸಂಬಂಧಿಸಿದಂತ ಮಾಹಿತಿಗಳು ಶ್ರೀಕಿಯ ಬ್ರೈನ್ ನಲ್ಲಿದೆ. ಇದಕ್ಕೆ ಲಿಖಿತ ದಾಖಲೆಗಳಿಲ್ಲ ಎಂದು ಹೇಳಲಾಗಿದೆ. ಹಾಗಾಗಿ ಶ್ರೀಕಿಯ ಪ್ರಾಣಕ್ಕೆ ಅಪಾಯವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ಅಪಘಾತದಲ್ಲಿ ಮೃತಪಟ್ಟ ಪುನೀತ್ ಅಭಿಮಾನಿ ಕೊನೆಯ ಕ್ಷಣದಲ್ಲಿ ಪತ್ನಿಗೆ ಹೇಳಿದ ಮಾತು ಕಣ್ಣೀರು ತರಿಸುತ್ತದೆ!

ಪ್ಯಾರಾಚೂಟ್ ನ ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ದಂಪತಿ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ: 14 ರಾಜ್ಯಗಳ 76 ಸ್ಥಳಗಳಲ್ಲಿ ಜಾಲಾಡಿದ ಸಿಬಿಐ

ಕುಡಿದು ತೂರಾಡುತ್ತಾ, ತೊದಲು ಮಾತನಾಡುತ್ತಾ ಶಾಲೆಗೆ ಪಾಠ ಮಾಡಲು ಬಂದ ಶಿಕ್ಷಕ

ಪ್ರತಾಪ್ ಸಿಂಹ ಹೆಣ್ಣೋ ಗಂಡೋ ಎಂದು ನೋಡಿಕೊಳ್ಳಲಿ | ಇಕ್ಬಾಲ್ ಅನ್ಸಾರಿ ತಿರುಗೇಟು

ಪ್ರವಚನ ನೀಡುತ್ತಲೇ ವೇದಿಕೆಯಲ್ಲಿಯೇ ಹೃದಯಾಘಾತದಿಂದ ನಿಧನರಾದ ಸ್ವಾಮೀಜಿ

ಇಂದು ಪುನೀತ್ ನಮನ: ಸ್ಟಾರ್ ನಟರು ಭಾಗಿಯಾಗುವ ಸಾಧ್ಯತೆ | ಪಾಸ್ ಇದ್ದವರಿಗೆ ಮಾತ್ರ ಎಂಟ್ರಿ!

ಇತ್ತೀಚಿನ ಸುದ್ದಿ