ರಾಜ್ಯದ ಬಿಟ್ ಕಾಯಿನ್ ಹಗರಣ ವಿಚಾರಕ್ಕೆ ಎಂಟ್ರಿಯಾದ ರಾಹುಲ್ ಗಾಂಧಿ!
ನವದೆಹಲಿ: ರಾಜ್ಯದ ಬಿಟ್ ಕಾಯಿನ್ ಹಗರಣ ಇದೀಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದು, ಇದೀಗ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಇದೀಗ ಈ ವಿಚಾರಕ್ಕೆ ಎಂಟ್ರಿಯಾಗಿದ್ದಾರೆ.
ರಾಜ್ಯದಲ್ಲಿ ಬಿಟ್ ಕಾಯಿನ್ ಪ್ರಕರಣ ಸಂಬಂಧ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಬಿಟ್ ಕಾಯಿನ್ ಬಹುದೊಡ್ಡ ಹಗರಣವಾಗಿದೆ. ಆದರೆ, ಅದನ್ನು ಮುಚ್ಚಿ ಹಾಕಲು ಅದಕ್ಕಿಂತಲೂ ಬಹುದೊಡ್ಡ ಹಗರಣ ನಡೆಯುತ್ತಿದೆ. ಹಗರಣದಲ್ಲಿ ಗಣ್ಯ ವ್ಯಕ್ತಿಗಳ ಹೆಸರು ಕೇಳಿ ಬಂದಿದ್ದು, ಅವರ ಹೆಸರು ಹೊರ ಬಂದರೆ, ಅವರ ಪ್ರತಿಷ್ಠೆಗೆ ಧಕ್ಕೆಯಾಗುವ ಭಯವಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ನಿನ್ನೆಯಷ್ಟೇ ಸುದ್ದಿಗೋಷ್ಠಿಯಲ್ಲಿ ರಾಜ್ಯದ ಬಿಟ್ ಕಾಯಿನ್ ಹಗರಣದ ಬಗ್ಗೆ ಮಾತನಾಡಿದ್ದ ಕಾಂಗ್ರೆಸ್ ಉಸ್ತುವಾರಿ, ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ, ಸಾವಿರಾರು ಕೋಟಿ ರೂಪಾಯಿಗಳ ಹಗರಣವನ್ನು ತನಿಖೆಗೆ ಆಗ್ರಹಿಸಿ ಎಂದು ಹೇಳುವ ಬದಲು ಪ್ರಧಾನಿ ಮೋದಿ, ಬಿಟ್ ಕಾಯಿನ್ ಪ್ರಕರಣವನ್ನು ನಿರ್ಲಕ್ಷಿಸಿ ಎಂದು ಸಿಎಂಗೆ ಹೇಳುವ ಮೂಲಕ ಪ್ರಕರಣವನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಈ ಪ್ರಕರಣವನ್ನುಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ:
https://chat.whatsapp.com/BRIYGgDbk8oI4UQjEMqwIG
ಇನ್ನಷ್ಟು ಸುದ್ದಿಗಳು
ಮಕ್ಕಳಿಗೆ ಸಿಹಿ ಹಂಚುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯನ್ನು ಎಳೆದೊಯ್ದು ಕತ್ತುಕೊಯ್ದ | ಬೆಚ್ಚಿ ಬಿದ್ದ ಜನತೆ
ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರ ದಾರುಣ ಸಾವು!
ರಚಿತಾ ರಾಮ್ “ಫಸ್ಟ್ ನೈಟ್” ಹೇಳಿಕೆಗೆ ಆಕ್ಷೇಪ: ಕ್ಷಮೆಯಾಚನೆಗೆ ಒತ್ತಾಯ
ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರಿಗೆ ಮಾತೃ ವಿಯೋಗ
ಪುನೀತ್ ಬದಲು ನನ್ನನ್ನಾದರೂ ಕರೆಯಬಾರದಿತ್ತೇ? | ಪರಮಾತ್ಮ ನೀನು ಹೀಗೆ ಮಾಡಬಾರದಿತ್ತು | ಭಾವುಕರಾದ ಜನಾರ್ದನ ಪೂಜಾರಿ